Monday, December 23, 2024

ಮೋಸ ಮಾಡಿದ ಸೇಡಂ ಶಾಸಕ : ಸಿಎಂಗೆ ಮಹಿಳೆ ದೂರು

ಬೆಂಗಳೂರು : ಶಾಸಕರೊಬ್ಬರಿಂದ ಅಗಿರೋ ಮೊಸಕ್ಕೆ ನ್ಯಾಯ ಕೊಡಿಸಿ ಎಂದು ಮಹಿಳೆಯೊಬ್ಬಳು ಮನವಿ ಸಿಎಂ ಅವರಿಗೆ ಮನವಿ ಮಾಡಿದ್ದಾರೆ.

ಕಾಮನ್ ಮ್ಯಾನ್ ಸಿಎಂಗೆ ಮಹಿಳೆಯೊಬ್ಬಳು ತಮ್ಮ ಟ್ವಿಟರ್ ಅಕೌಂಟ್​​ನಲ್ಲಿ ಕಾಮೆಂಟ್ ಬಾಕ್ಸ್ ನಲ್ಲಿ ವಿಷಯವನ್ನು ಬರೆದು ಶಾಸಕನ ಮೇಲೆ ಆರೋಪ ಹಾಕುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ವಿರುದ್ದ ದೂರು ಕೊಟ್ಟಿರುವ ಘಟನೆ ನಡೆದಿದೆ.

ಮಹಿಳೆಯೊಬ್ಬಳು ನನಗೆ ನಂಬಿಸಿ ಮೋಸ ಮಾಡಿ ಮಗುವೊಂದನ್ನ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೊನ್ನೆ ಬಿಜೆಪಿ ಕಚೇರಿಯಲ್ಲಿ ಮೋದಿ ಭಾಷಣದ ವೀಕ್ಷಣೆಯ ಪೋಟೋವೊಂದನ್ನ ಸಿಎಂ ತಮ್ಮ ಟ್ವಿಟರ್​​ನಲ್ಲಿ ಹಾಕಿದ್ದಾರೆ. ಈ ವೇಳೆ ರಾಜ್ ಕುಮಾರ್ ಪಾಟೀಲ್ ಸಿಎಂ ಜೊತೆ ಇರೋ ಫೋಟೋ ಸಹ ಹಾಕಲಾಗಿದೆ. ಇದನ್ನು ನೋಡಿದ ಮಹಿಳೆ ಆ ಪೋಟೋಗೆ ಕಾಮೆಂಟ್ ಮಾಡುವ ಮೂಲಕ ಪರಿಹಾರ ಕೊಡಿಸಿ ಎಂದು ಮತ್ತು ಎಲ್ಲಿದ್ದಿರಾ ಕಾಮನ್ ಸಿಎಂ ಪ್ಲೀಸ್ ರೆಸ್ಪಾಂಡ್ ಮಾಡಿ ಎಂದು ಸಾಲು ಸಾಲು ಕಾಮೆಂಟ್ ಹಾಕುವ ಮೂಲಕ ನ್ಯಾಯ ಕೊಡಿಸಿ ಎಂದು ಮಹಿಳೆ ಕೇಳಿಕೊಂಡಿದ್ದಾಳೆ.

RELATED ARTICLES

Related Articles

TRENDING ARTICLES