ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ ಗೂಗಲ್ ತನ್ನ ಕ್ರೋಮ್ ಬ್ರೌಸರ್ (Browser) ಲೋಗೋವನ್ನು ಬದಲಾಯಿಸುತ್ತಿದೆ. ಗೂಗಲ್ ಕ್ರೋಮ್‌ನ ವಿನ್ಯಾಸಕ ಎಲ್ವಿನ್ ಹೂ, ಟ್ವಿಟರ್‌ನಲ್ಲಿ ಲೋಗೋ ಮರುವಿನ್ಯಾಸದ ಮೊದಲ ನೋಟವನ್ನು ಹಂಚಿಕೊಂಡಿದ್ದಾರೆ.
ನಿಮ್ಮಲ್ಲಿ ಕೆಲವರು ಇಂದು Chrome ನ ಕ್ಯಾನರಿ ಅಪ್‌ಡೇಟ್‌ನಲ್ಲಿ ಹೊಸ ಐಕಾನ್ ಅನ್ನು ಗಮನಿಸಿರಬಹುದು. ಹೌದು! ನಾವು 8 ವರ್ಷಗಳಲ್ಲಿ ಮೊದಲ ಬಾರಿಗೆ Chrome ನ ಬ್ರ್ಯಾಂಡ್ ಐಕಾನ್‌ಗಳನ್ನು ರಿಫ್ರೆಶ್ ಮಾಡುತ್ತಿದ್ದೇವೆ. ಹೊಸ ಐಕಾನ್‌ಗಳು ನಿಮ್ಮ ಸಾಧನಗಳಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ” ಎಂದು ಹೂ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.