ವಿಧಾನಪರಿಷತ್ ಸದಸ್ಯ ಇಬ್ರಾಹಿಂ ಕಾಂಗ್ರೆಸ್ ತೊರೆಯೋದು ಕನ್ಫರ್ಮ್ ಆಗಿದೆ..ಮಾರ್ಚ್ ೧೪ ರ ನಂತ್ರ ಜೆಡಿಎಸ್ ಸೇರೋಕೆ ಮುಹೂರ್ತ ಫಿಕ್ಸ್ ಆಗಿದೆ..ಅಷ್ಟರೊಳಗೆ ತಮ್ಮ ಬಲಪ್ರದರ್ಶನಕ್ಕಾಗಿ ರಾಜ್ಯ ಸುತ್ತೋಕೆ ಹೊರಟಿದ್ದಾರೆ.. ಸಿದ್ದರಾಮಯ್ಯನವರ ಅಹಿಂದಕ್ಕೆ ಪ್ರತಿಯಾಗಿ ಅಲಿಂಗಚಳುವಳಿಯನ್ನ ಹುಟ್ಟುಹಾಕೋಕೆ ತೆರೆಮರೆಯಲ್ಲೇ ಸ್ಕೆಚ್ ರೆಡಿಮಾಡಿಕೊಳ್ತಿದ್ದಾರೆ.
ಪದೇ ಪದೇ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ್ರೂ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿರ್ಲಿಲ್ಲ..ಆದ್ರೆ ಯಾವಾಗ ಮೇಲ್ಮನೆ ಪ್ರತಿಪಕ್ಷ ನಾಯಕ ಸ್ಥಾನ ಮಿಸ್ಸಾಯ್ತೋ ಆಗ್ಲೇ ಇಬ್ರಾಹಿಂ ಕೈ ನಾಯಕರ ವಿರುದ್ಧ ರೊಚ್ಚಿಗೆದ್ದಿದ್ರು..ಕಾಂಗ್ರೆಸ್ ನಾಯಕರಿಂದ ಅಂತರ ಕಾಯ್ದುಕೊಂಡ್ರು..ಬೆಂಗಳೂರಿನಲ್ಲಿ ಧರ್ಮಗುರುಗಳ ಸಭೆ ನಡೆಸಿದ್ರು..ಮೈಸೂರಿನಲ್ಲಿ ಸಮುದಾಯದ ಮುಖಂಡರ ಮೀಟಿಂಗ್ ಮಾಡಿದ್ರು..ತದ ನಂತರ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯ ಬಗ್ಗೆ ನಿರ್ಧಾರಕ್ಕೆ ಬಂದಿದ್ದಾರೆ. ಮಾರ್ಚ್ 14ರ ನಂತರ ಸೂಕ್ತ ಸಮಯ ನೋಡಿಕೊಂಡು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಅಲ್ಲಿ ಜೆಡಿಎಸ್ ಸೇರ್ಪಡೆಯಾಗೋಕೆ ಮನಸ್ಸು ಮಾಡಿದ್ದಾರೆ ಸಿಎಂ ಇಬ್ರಾಹಿಂ.
ಇಬ್ರಾಹಿಂ ಜೆಡಿಎಸ್ ಸೇರ್ಪಡೆಗೂ ಮುನ್ನ ತಮ್ಮ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ. ಫೆಬ್ರವರಿ 14 ರಂದು ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಸಭೆ ಕರೆದಿದ್ದಾರೆ..ಸಭೆಯಲ್ಲಿ ಮುಖಂಡರ ಅಭಿಪ್ರಾಯ ಪಡೆದು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಿ, 1 ಲಕ್ಷ ಜನರನ್ನ ಸೇರಿಸಿ ಜೆಡಿಎಸ್ ಸೇರೋಕೆ ಪ್ಲಾನ್ ರೂಪಿಸಿಕೊಂಡಿದ್ದಾರೆ..ಸಿದ್ದು ಹುಟ್ಟುಹಾಕಿದ್ದ ಅಹಿಂದಕ್ಕೆ ಬದಲಾಗಿ ಅಲಿಂಗ ಎಂಬ ಚಳವಳಿಯನ್ನ ಹುಟ್ಟುಹಾಕೋಕೆ ನಿರ್ಧರಿಸಿದ್ದಾರೆ. ಅಲ್ಪಸಂಖ್ಯಾತರು, ಲಿಂಗಾಯತರು, ಗೌಡರನ್ನು ಒಂದಾಗಿಸಬೇಕು. ಬಹುಸಂಖ್ಯಾತರು ದಲಿತರನ್ನು, ಹಿಂದುಳಿದವರನ್ನು ಆಲಿಂಗನ ಮಾಡಿಕೊಳ್ಳಬೇಕು. ಇದೇ ‘ಅಲಿಂಗ ಚಳುವಳಿ’ ಎಂದು ಹೇಳಿದರು.
ಒಟ್ನಲ್ಲಿ ಇಲ್ಲಿಯವರೆಗೆ ಇಬ್ರಾಹಿಂ ಕಾಂಗ್ರೆಸ್ ಬಿಡ್ತಾರಾ ಇಲ್ವಾ ..ಜೆಡಿಎಸ್ ಗೆ ಹೋಗ್ತಾರಾ ಎಂಬ ಗೊಂದಲಗಳಿದ್ವು..ಆದ್ರೆ ಅಂತಿಮವಾಗಿ ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಬಗ್ಗೆ ಪ್ರಕಟಿಸಿದ್ದಾರೆ. ಅಲ್ಲಿಗೆ ಅವರ ಕಾಂಗ್ರೆಸ್ ಜೊತೆಗಿನ ನಂಟು ಮುಗಿದ ಅಧ್ಯಾಯ.