Monday, December 23, 2024

ಸಿಎಂ ದೆಹಲಿ ಟೂರ್ ದಿನಾಂಕ ಫಿಕ್ಸ್‌

ಬೆಂಗಳೂರು : ಉಳಿದಿರುವ ನಾಲ್ಕು ಸ್ಥಾನಕ್ಕೆ ಸಂಪುಟ ವಿಸ್ತರಣೆ ಕಾಲ ಕೂಡಿ ಬಂದಂತಿದೆ. ಯಾಕಂದ್ರೆ ಸಿಎಂ ದೆಹಲಿ ಭೇಟಿ ಫಿಕ್ಸ್‌ ಆಗಿದೆ. ಬಹುತೇಕ ವರಿಷ್ಠರಿಂದ ಅನುಮತಿ ಪಡೆದುಕೊಂಡೇ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಕೇಂದ್ರ ಸಚಿವರು, ಸಂಸದರ ಜೊತೆ ಸಭೆ ನಡೆಸಲಿದ್ದು ಇದ್ರ ಜೊತೆ ಕ್ಯಾಬಿನೆಟ್ ವಿಸ್ತರಣೆ ಸಂಬಂಧ ಸಭೆ ನಡೆಸಲು ಇದ್ದಾರೆ. ಇದ್ರ ಬೆನ್ನಲ್ಲೇ ಸಚಿವಾಕಾಂಕ್ಷಿಗಳು ಒತ್ತಡ ಹೆಚ್ಚಾಗಿದೆ.

ಸಿಎಂ ಸೋಮವಾರ ಮಧ್ಯಾಹ್ನ ೧ ಗಂಟೆಗೆ ಕೇಂದ್ರ ಸಚಿವ, ಶಾಸಕರ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಸಿಎಂ ರಾಜ್ಯಕ್ಕೆ ಸಿಗಬೇಕಾದ ಕೇಂದ್ರ ಯೋಜನೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಆದಾದ ಬಳಿಕ ವರಿಷ್ಟರನ್ನ ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಸಚಿವ ಆಕಾಂಕ್ಷಿಗಳ ದಂಡು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಹಾಗೇ ಸಚಿವರಾಗಿರೋ ಪ್ರಭು ಚೌಹಾಣ್ ಒಂದು ಕೂಡ ಸಿಎಂ ಭೇಟಿಯಾಗಿ ಸಚಿವ ಸ್ಥಾನದಿಂದ ಕೈಬಿಡಬೇಡಿ ಅಂತ ಸಿಎಂ ಮುಂದೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಸಚಿವಾಕಾಂಕ್ಷಿಗಳ ಪರ ಬೆಂಬಲಿಗರ ಲಾಬಿ :

ಸೋಮವಾರ ಸಿಎಂ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ತೆಗೆದುಕೊಂಡು ದೆಹಲಿಗೆ ಹೋಗಬೇಕು. ಹೀಗಾಗಿ ಸಿಎಂ ಅಳೆದು ತೂಗಿ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸುತ್ತಿದ್ದಾರೆ. ಇಂದು ಅಖಿಲ ಕರ್ನಾಟಕದ ವಿಶ್ವಕರ್ಮ ಮಹಾಸಭಾದ ಸದಸ್ಯರು ಗೃಹಕಚೇರಿ ಕೃಷ್ಣಾಗೆ ಭೇಟಿ ನೀಡಿ ಕೆ ಪಿ ನಂಜುಂಡಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ಮೊದಲು ಕುಮಾರಕೃಷಾ ಗೆಸ್ಟ್ ಹೌಸ್ ಗೆ ತೆರಳುವಂತೆ ಪೊಲೀಸರು ಹೇಳಿದ್ರು. ಇದಕ್ಕೆ ಒಪ್ಪದ ನಂಜುಂಡಿ ಬೆಂಬಲಿಗರು ರಸ್ತೆಬದಿಯ ಫುಟ್ ಪಾತ್ ನಲ್ಲಿ ಕುಳಿತು ಸಚಿವ ಸ್ಥಾನಕ್ಕಾಗಿ ಆಗ್ರಹಿಸಿದರು. ಈವರೆಗೆ ವಿಶ್ವಕರ್ಮ ಸಮುದಾಯಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಈಗ ಸಚಿವ ಸ್ಥಾನ ಸಿಗದೇ ಹೋದ್ರೆ ಕೆ ಪಿ ನಂಜುಂಡಿ ಅವರಿಂದ ಪಕ್ಷಕ್ಕೆ ರಾಜೀನಾಮೆ ಕೊಡಿಸ್ತಿವಿ ಅಂತ ವಿಶ್ವಕರ್ಮ ಮುಖಂಡರು ಹೇಳಿದ್ದಾರೆ.

ಇತ್ತ ಕೆಲವರು ಬೆಂಗಳೂರಿನಲ್ಲಿದ್ದು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದರೆ, ಇನ್ನು ಕೆಲವರು ದೆಹಲಿಗೆ ಹೋಗಿ ಲಾಬಿ ನಡೆಸುತ್ತಿದ್ದಾರೆ. ಆದ್ರೆ ಹೈಕಮಾಂಡ್ ಯಾರಿಗೆ ಸಚಿವ ಸ್ಥಾನಕ್ಕೆ ಅಸ್ತು ಅನ್ನುತ್ತೆ ಅನ್ನೋದು ಸೋಮವಾರದ ನಂತರವೇ ಗೊತ್ತಾಗಬೇಕಿದೆ.

RELATED ARTICLES

Related Articles

TRENDING ARTICLES