Monday, December 23, 2024

ಭೂಗತ ಕೇಬಲ್ ಕಾಮಗಾರಿಗೆ ಶಾಸಕರ ತರಾಟೆ

ಬೆಂಗಳೂರು: ಪವರ್ ಟಿವಿಯ ಬಿಬಿಎಂಪಿ ರೌಂಡ್ ಅಫ್ ಕಾರ್ಯದ್ರಮದಲ್ಲಿ ಮುಖ್ಯವಾಗಿ ಹೆಬ್ಬಾಳ ಕ್ಷೇತ್ರದಲ್ಲಿ OFC ಕೇಬಲ್ ಗಳ ಹಾವಳಿ ಬಗ್ಗೆ ಚರ್ಚೆ ನಡೆಸಲಾಗಿತ್ತು . ಇದರ ಬಗ್ಗೆ ಸ್ಥಳೀಯರು ಕೂಡ ಆಕ್ರೋಶ ಹೊರ ಹಾಕಿದ್ರು ಇದರ ಬೆನ್ನಲ್ಲೇ ಇವತ್ತು ಎಚ್ಚೆತ್ತ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬೈರತಿ ಸುರೇಶ್ ರವರು ಇಂದು ಕ್ಷೇತ್ರದಾದ್ಯಂತ ಸಂಚರಿಸಿದ್ರು .

ರಸ್ತೆಗಳನ್ನು ಅಗೆಯುತ್ತಿದ್ದ ಜಿಯೋ, ಏರ್ಟೆಲ್ ಹಾಗೂ ಖಾಸಗಿ ಭೂಗತ ಕೇಬಲ್ ಗಳ ಕಾಮಗಾರಿಗಳು ನಡೆಯುತ್ತಿದ್ದ ಸ್ಥಳಕ್ಕೆ ದಿಡೀರ್ ಭೇಟಿ ನೀಡಿ ರಸ್ತೆ ಅಗೆಯುತ್ತಿದ್ದ ಭೂಗತ ಕೇಬಲ್ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು, ಸ್ಥಳದಲ್ಲಿಯೇ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ಭೂಗತ ಕೇಬಲ್ ಅಳವಡಿಕೆ ಅವ್ಯವಹಾರದ ಕುರಿತು, ಬಿಬಿಎಂಪಿ ವತಿಯಿಂದ ಈ ಭೂಗತ ಕೇಬಲ್ ಅಳವಡಿಸಲು ಯಾವುದೇ ಅನುಮತಿ ನೀಡದಿರಲು ಮಾನ್ಯ ಆಯುಕ್ತರ ಕಛೇರಿಗೆ ಮನವಿ ಪತ್ರವನ್ನು ಸಲ್ಲಿಸಿದರು…

RELATED ARTICLES

Related Articles

TRENDING ARTICLES