ಬೆಂಗಳೂರು : ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್ ಸಂಘರ್ಷದ ಬಗ್ಗೆ MLC ಸಿ.ಎಂ.ಇಬ್ರಾಹಿಂ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ಸರ್ಕಾರ ವಿವಾದಗಳನ್ನು ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದೆ. ವಿವಾದಗಳನ್ನು ಸೃಷ್ಟಿಸಿದ್ದರೂ ಅದರಲ್ಲಿ ಸಫಲತೆ ಪಡೆಯಲು ಅವರಿಂದ ಆಗುತ್ತಿಲ್ಲ. ಈಗ ಹಿಜಾಬ್ ವಿವಾದವನ್ನು ತಂದಿದ್ದಾರೆ. ಮೈಸೂರು ಮಹಾರಾಜರ ಕಾಲದಲ್ಲಿಯೂ ಹಿಜಾಬ್ ಇತ್ತು.
ಮಾರವಾಡಿ ಸಮಾಜದಲ್ಲಿ ಮುಖದ ಮೇಲೆ ಪರದೆ ಹಾಕಿಕೊಳ್ಳುತ್ತಾರೆ. ಉತ್ತರ ಕರ್ನಾಟಕದಲ್ಲಿ ನಮ್ಮ ಹೆಣ್ಣು ಮಕ್ಕಳು ತಲೆ ಮೇಲೆ ಸೀರೆ ಸೆರಗಿಲ್ಲದೆ ಹೊರಗೆ ಬರಲ್ಲ. ಹೆಣ್ಮಕ್ಕಳು ಮುಖ ಮುಚ್ಕೊಂಡು ಬಂದರೆ ನಿಮಗೇನು ತೊಂದರೆ? ಅವರು ಮುಖ ತೋರಿಸಿದರೆ ನಿಮಗೇನು ಆನಂದ? ಅವರೇನು ಬ್ಯೂಟಿ ಕಾಂಟೆಸ್ಟ್ಗೆ ಬರ್ತಾರಾ? ಅಥವಾ ವಿದ್ಯೆ ಕಲಿಯಲು ಬರ್ತಾರೆ ಎಂದು ಹೇಳಿದರು. ಅಲ್ಲದೇ ಅನೇಕರು ಹಿಜಾಬ್ ಹಾಕೊಲ್ಲ ಅವರಿಗೆ ನಾವು ಒತ್ತಡ ಹಾಕಿದ್ದೀವಾ, ಹೀಗಾಗಿ ನಾನು ಸರ್ಕಾರ ಶೀಘ್ರವಾಗಿ ನಿರ್ಧಾರ ಮಾಡಬೇಕು ಎಂದು MLC ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.