Tuesday, January 7, 2025

ಬಿಜೆಪಿಯಿಂದ ದೇಶ ವಿಭಜನೆ-ರಾಹುಲ್ ಗಾಂಧಿ

ನವದೆಹಲಿ: ಶ್ರೀಮಂತರಿಗಾಗಿ, ಬಡವರಿಗಾಗಿ ಭಾರತವನ್ನು 2 ವಿಭಾಗವಾಗಿ ವಿಭಜಿಸಲಾಗಿದೆ. ಕೇಂದ್ರ ಸರ್ಕಾರ ಬಡವರಿಂದ ಹಣವನ್ನು ಪಡೆದು ಶ್ರೀಮಂತರಿಗೆ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ಧಾರೆ.

ನಾನು ನಿನ್ನೆ ಲೋಕಸಭೆಯಲ್ಲಿ ಭಾಷಣ ಮಾಡಿದ್ದು, ಅದರಲ್ಲಿ ದೇಶ ಎದುರಿಸುತ್ತಿರುವ ಎರಡು-ಮೂರು ಸವಾಲುಗಳ ಬಗ್ಗೆ ಮಾತನಾಡಿದ್ದೆ. ಬಿಜೆಪಿ ಮತ್ತು ಅದರ ಸಿದ್ಧಾಂತಗಳು ನಮ್ಮ ದೇಶವನ್ನು ಅಪಾಯದತ್ತ ಕೊಂಡೊಯ್ಯುತ್ತಿವೆ. ಮೊದಲ ಗಂಭೀರ ಅಪಾಯವೆಂದರೆ ಬಿಜೆಪಿ ದೇಶವನ್ನು ಎರಡು ದೇಶಗಳಾಗಿ ವಿಭಜಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಬಿಜೆಪಿ ಮತ್ತು ಆರ್​ಎಸ್​ಎಸ್​ ತಮ್ಮ ಸಿದ್ಧಾಂತವನ್ನು ಎಲ್ಲಾ ರಾಜ್ಯಗಳ ಮೇಲೆ ಹೇರಲು ಬಯಸುತ್ತವೆ. ಬಿಜೆಪಿ ದೇಶಾದ್ಯಂತ ದ್ವೇಷ ಹರಡಿದೆ. ದೇಶಭಕ್ತಿ ಎಂದರೆ ದೇಶವನ್ನು ಬಲಪಡಿಸುವುದು ಮತ್ತು ಒಗ್ಗೂಡಿಸುವುದು ಎಂದಿದ್ದಾರೆ.

RELATED ARTICLES

Related Articles

TRENDING ARTICLES