Saturday, May 11, 2024

ರಮೇಶ್​ ಜಾರಕಿಹೊಳಿಗೆ ಸಿಡಿ ಲೇಡಿ ಕೇಸಲ್ಲಿ ಸಿಗುತ್ತಾ ಬಿಗ್​ ರಿಲೀಫ್​..?

ಒಂದ್ಕಡೆ ರಮೇಶ್​ ಜಾರಕಿಹೊಳಿ ಮಂತ್ರಿಗಿರಿಗಾಗಿ ಮಸಲತ್ತು ನಡೆಸ್ತಿದ್ರೆ. ಮತ್ತೊಂದೆಡೆ ಸಿಡಿ ಕೇಸ್ ಮತ್ತೆ ಸಾಹುಕಾರ್​ಗೆ​ ಸುತ್ತಿಕೊಳ್ಳುತ್ತಾ ಅನ್ನೋ​ ಚರ್ಚೆ ಶುರುವಾಗಿದೆ. ಸಿಡಿ ಲೇಡಿ ಕೇಸ್​ಗೆ ಸಂಬಂಧಿಸಿದಂತೆ ತನಿಖಾ ವರದಿ ಸಲ್ಲಿಕೆಗೆ ಹೈಕೋರ್ಟ್ ಅಸ್ತು ಎಂದಿದೆ.

ಸಿಡಿ ಸುಳಿಯಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್​ ಜಾರಕಿಹೊಳಿ, ಮತ್ತೆ ಸಚಿವರಾಗಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಒಂದೆಡೆ ಸಾಹುಕಾರ್ ಮಂತ್ರಿಯಾಗಲು ಪ್ರಯತ್ನ ನಡೆಸಿದ್ರೆ, ಮತ್ತೊಂದೆಡೆ ಸಾಹುಕಾರ್​ಗೆ ಮಂತ್ರಿಗಿರಿ ತಪ್ಪಿಸಲು ಬೆಳಗಾವಿ ಬಿಜೆಪಿಯ ಬಿ ಟೀಂ ಅಡ್ಡಗಾಲು ಹಾಕ್ತಿದೆ. ಪರಿಷತ್ ಚುನಾವಣೆ ಸೋಲಿನ ಬಳಿಕ ಜಾರಕಿಹೊಳಿ ಬ್ರದರ್ಸ್ ವಿರುದ್ದ ಒಂದಾಗಿರುವ ಸಚಿವ ಕತ್ತಿ-ಸವದಿ ಟೀಂ, ಜಾರಕಿಹೊಳಿ ಬ್ರದರ್ಸ್ ವಿರುದ್ದ ಸಿಎಂಗೆ ದೂರು ನೀಡಿದ್ದಾರೆ.. ಇದ್ರಿಂದ ಅಲರ್ಟ್​ ಆಗಿರೋ ಜಾರಕಿಹೊಳಿ ಬ್ರದರ್ಸ್, ತಮ್ಮದೇ ರಾಜಕೀಯ ದಾಳ ಉರುಳಿಸುವಲ್ಲಿ ತಲ್ಲಿಣರಾಗಿದ್ದಾರೆ.

ಗೋವಾ ಚುನಾವಣಾ ಪ್ರಚಾರಾರ್ಥ ಪಣಜಿಗೆ ಬಂದಿರುವ ಮಹಾರಾಷ್ಟ್ರ ಮಾಜಿ ಸಿಎಂ ದೇವೆಂದ್ರ ಫಡ್ನವಿಸ್ ಅವರನ್ನ ಭೇಟಿಯಾಗಿರುವ ರಮೇಶ ಜಾರಕಿಹೊಳಿ, ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.. ತಮ್ಮ ವಿರುದ್ದ ಸ್ವಪಕ್ಷೀಯರೇ ನಡೆಸುತ್ತಿರುವ ಕುತಂತ್ರ ಕುರಿತು ದೂರು ನೀಡಿದ್ದಾರೆ.. ಅಷ್ಟೇ ಅಲ್ಲ ಸಚಿವ ಸ್ಥಾನ ಕೊಡಿಸುವಲ್ಲಿ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಬೇಕೆಂದು ಫಡ್ನವಿಸ್ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು, ಸಿಡಿ ಕೇಸ್​ ಸಂಬಂಧ ಎಸ್ ಐಟಿ ತನಿಖೆ ನಡೆಸುತ್ತಿರುವಾಗಲೇ ಯುವತಿ, ಎಸ್ ಐಟಿ ರಚನೆಯನ್ನೇ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ರು. ಈ ವೇಳೆ ತನಿಖಾ ವರದಿಯನ್ನು ಸಲ್ಲಿಸದಂತೆ ಕೋರಲಾಗಿತ್ತು. ಹೈಕೋರ್ಟ್ ಸಿಜೆ ರಿತುರಾಜ್ ಅವಸ್ಥಿ, ಎಸ್ ಐಟಿ ತನಿಖಾ ವರದಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಲು ಆದೇಶಿಸಿದೆ.. ಯುವತಿ ನೀಡಿರುವ ಅತ್ಯಾಚಾರ ಕೇಸ್ ನಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗುತ್ತಾ..? ಅಥವಾ ಚಾರ್ಚ್ ಶೀಟ್ ಸಲ್ಲಿಸುತ್ತಾರಾ ಅನ್ನೋ ಕುತೂಹಲ ಉಂಟಾಗಿದೆ. ಬಿ ರಿಪೋರ್ಟ್ ಸಲ್ಲಿಸಿದ್ರೆ ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್ ಸಿಗಲಿದೆ. ಈ ಮೂಲಕ ಮತ್ತೊಮ್ಮೆ ಸಚಿವ ಸ್ಥಾನದ ಜಾಕ್ ಪಾಟ್ ಹೊಡೆಯುವ ಸಾಧ್ಯತೆಯಿದೆ. ಇನ್ನು ಚಾರ್ಚ್ ಶೀಟ್ ಸಲ್ಲಿಸಿದ್ರೆ, ಜಾರಕಿಹೊಳಿಗೆ ಸಂಕಷ್ಟ ಎದುರಾಗಲಿದೆ. ಕೇಸ್ ಇತ್ಯರ್ಥದವರೆಗೂ ಸಚಿವ ಸ್ಥಾನ ಕೈತಪ್ಪಿ ನಿರಾಸೆ ಅನುಭವಿಸುವ ಸಾಧ್ಯತೆಯೂ ಇದೆ.

ಎಸ್ ಐಟಿಗೆ ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಯುವತಿ ಪರ ವಕೀಲರು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಸಂಕೇತ್ ಏಣಗಿ ಟ್ವೀಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅದೇನೆ ಇರಲಿ ರಮೇಶ್ ಜಾರಕಿಹೊಳಿಗೆ ಇಂದು ಶುಕ್ರವಾರ ಮಹತ್ವದ ದಿನವಾಗುವ ಸಾಧ್ಯತೆ ಇದೆ. ಎಸ್ ಐಟಿ ತನಿಖಾ ವರದಿಯಲ್ಲಿ ಯಾವ ಮಾಹಿತಿ ಹೊರಬರುತ್ತದೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES