Monday, December 23, 2024

ಶುಕ್ರವಾರದಿಂದ ಸಂತ ಸೇವಾಲಾಲ್ ರಾಜ್ಯಮಟ್ಟದ ಕ್ರಿಕೆಟ್ ಕಪ್ ಟೂರ್ನಿ

ಬೆಂಗಳೂರು: ಬೆಂಗಳೂರಿನ ತಿಪ್ಪೇನಹಳ್ಳಿಯಲ್ಲಿರುವ ಶ್ರೀ ಕ್ರಿಕೆಟ್ ಮಂದಿರಾ ಗ್ರೌಂಡ್​ನಲ್ಲಿ ಶುಕ್ರವಾರದಿಂದ ರಾಜ್ಯಮಟ್ಟದ ಸಂತ್ ಸೇವಾಲಾಲ್ ಕ್ರಿಕೆಟ್ ಕಪ್ ಟೂರ್ನಿಮೆಂಟ್ ನಡೆಯಲಿದೆ. ಬಂಜಾರ ಜನಾಂಗದ ದೇವದೂತರೆಂದೇ ಜನಮಾನಸದಲ್ಲಿ ಬೇರುಬಿಟ್ಟಿರುವ ಸಂತ ಸೇವಾಲಾಲ್​ರ 283ನೆಯ ಜಯಂತಿಯ ಸ್ಮರಣಾರ್ಥವಾಗಿ ಈ ಕ್ರಿಕೆಟ್ ಟೂರ್ನಿಮೆಂಟ್ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾಗಿರುವ ಸುರೇಶ್ ರಾಠೋಡ್ ತಿಳಿಸಿದ್ದಾರೆ.

ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಈ ಟೂರ್ನಿಮೆಂಟ್​ನಲ್ಲಿ ತಂಡಗಳು ಭಾಗವಹಿಸುತ್ತಿವೆ. ಟೂರ್ನಿಮೆಂಟ್ ಉದ್ಘಾಟನೆಯನ್ನು ಫೆಬ್ರವರಿ 4ರ ಬೆಳಿಗ್ಗೆ 9ಗಂಟೆಗೆ ಪಶುಸಂಗೋಪನಾ ಸಚಿವರಾದ ಶ್ರೀ ಪ್ರಭು ಚವ್ಹಾಣ್​ರವರು ಮಾಡಲಿದ್ದಾರೆ. ಅತಿಥಿಗಳಾಗಿ ಬಂಜಾರಾ ಯುವನಾಯಕ ಶ್ರೀ ಕೃಷ್ಣಾ ನಾಯಕ್ ಹಾಗೂ ಶ್ರೀ ನರೇಂದ್ರ ರಾಠೋಡ್, ಓಂಪ್ರಕಾಶ್ ಭಾಗವಹಿಸಲಿದ್ದಾರೆ. ಟೂರ್ನಿಮೆಂಟ್​ನಲ್ಲಿ ಗೆದ್ದ ತಂಡಕ್ಕೆ ಪ್ರಥಮ ಬಹುಮಾನವಾಗಿ 100000, ದ್ವಿತೀಯ ತಂಡಕ್ಕೆ 50000 ಹಾಗೂ ತೃತೀಯ ತಂಡಕ್ಕೆ 25000 ಬಹುಮಾನ ಸಿಗಲಿದೆ.

RELATED ARTICLES

Related Articles

TRENDING ARTICLES