Monday, December 23, 2024

OTTಯಲ್ಲಿ ‘ಒನ್ ಕಟ್ ಟು ಕಟ್’

ಸಿನಿಮಾ : ಓಟಿಟಿಯಲ್ಲಿ ಕನ್ನಡ ಚಿತ್ರಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಲವು ಚಿತ್ರಗಳು ಉತ್ತಮ ಆಫರ್ ಗಿಟ್ಟಿಸಿಕೊಳ್ಳುತ್ತಿದ್ದು, ಬಹಳಷ್ಟು ಸಿನಿಮಾಗಳು ನೇರವಾಗಿ ಓಟಿಟಿಯಲ್ಲೇ ತೆರೆಕಾಣುತ್ತಿವೆ.

ಈ ಪೈಕಿ ಪುನೀತ್ ರಾಜ್​ಕುಮಾರ್ ನಿರ್ಮಾಣದ ಮೂರು ಚಿತ್ರಗಳು ಈ ತಿಂಗಳಲ್ಲಿ ರಿಲೀಸ್ ಆಗಲಿವೆ. ಈಗಾಗಲೇ ದಾನಿಶ್ ಸೇಠ್ ನಟನೆಯ ‘ಒನ್ ಕಟ್ ಟು ಕಟ್’ ಚಿತ್ರ ಇಂದಿನಿಂದ ಅಮೆಜಾನ್ ಪ್ರೈಮ್​ನಲ್ಲಿ ಬಿತ್ತರವಾಗುತ್ತಿದೆ. ನಟ ದಾನಿಶ್ ಸೇಠ್​​ ‘ಒನ್ ಕಟ್ ಟು ಕಟ್’ನಲ್ಲಿ ಗೋಪಿ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಪಿಆರ್​ಕೆ ಪ್ರೊಡಕ್ಷನ್ಸ್ ಉಸ್ತುವಾರಿ ಹೊತ್ತಿರುವ ಅಶ್ವಿನಿ ಪುನೀತ್​ ರಾಜ್​ಕುಮಾರ್ ಈ ಕುರಿತು ಟ್ವೀಟ್ ಮಾಡಿದ್ದು, ‘ಗೋಪಿ ಈಗ ನಿಮ್ಮ ಮುಂದೆ ಬಂದಿದ್ದಾನೆ’ ಎಂದು ಬರೆದಿದ್ದಾರೆ.

RELATED ARTICLES

Related Articles

TRENDING ARTICLES