ಮಂಡ್ಯ : ಇಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ವಿಚಾರದ ಹಿನ್ನಲೆ, ರಾಜ್ಯಕ್ಕೆ ಹೆಚ್ಚಿನ ಬೇಡಿಕೆಗಳನ್ನು ಪಡೆಯಬೇಕೆಂದು ನಿರೀಕ್ಷೆ ಇದೆ. ನಮ್ಮ ನಿರೀಕ್ಷೆ ಈಡೇರುತ್ತೆ ಎನ್ನುವ ನಂಬಿಕೆ ನಮಗೆ ಇಲ್ಲ ಎಂದು ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಕರ್ನಾಟಕಕ್ಕೆ ರಾಜ್ಯಕ್ಕೆ ಮೊದಲಿಂದಲೂ ಅನ್ಯಾಯವಾಗಿದೆ. ರಾಜ್ಯದ ಕೊಡುಗೆ ದೇಶಕ್ಕೆ ದೊಡ್ಡ ಮಟ್ಟದಲ್ಲಿದೆ. ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಮಾಡಿ. ಈ ಬಾರಿ ನೋಡೋಣ ನಮ್ಮ ರಾಜ್ಯಕ್ಕೆ ಏನು ಕೊಡ್ತಾರೆ..? ಎಂದು ಕಾದುನೋಡಬೇಕಿದೆ ಎಂದರು.
ರಾಷ್ಟ್ರೀಯ ಪಕ್ಷಗಳ ಬಗ್ಗೆ ಯಾವುದೇ ರೀತಿಯ ನಿರೀಕ್ಷೆ ಇಲ್ಲ. ನಮ್ಮ ಬೇಡಿಕೆಯನ್ನ ಗೌರವಯುತವಾಗಿ ಕೇಂದ್ರ ಪರಿಗಣಿಸಬೇಕು ಮಾಜಿ ಸಿಎಂ H.D.ಕುಮಾರಸ್ವಾಮಿ ಎಂದು ಹೇಳಿದ್ದಾರೆ.