Wednesday, January 22, 2025

ಸಂಸದ ಡಿಕೆ ಸುರೇಶ್ ವಿರುದ್ದ ಹೆಚ್ಡಿಕೆ ವಾಗ್ದಾಳಿ

ರಾಮನಗರ:ಚನ್ನಪಟ್ಟಣದಲ್ಲಿ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ ರಾಮನಗರದ ಕೆಲವು ಗ್ರಾಮಗಳನ್ನು ಚನ್ನಪಟ್ಟಣಕ್ಕೆ ಸೇರಿಸಲು ಪ್ರಸ್ತಾವನೆ ವಿಚಾರದ ಕುರಿತು ಸಂಸದ ಡಿಕೆ ಸುರೇಶ್ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.

ದೊಡ್ಡ ಮಣ್ಣುಗುಡ್ಡೆ, ಕುಂಬಾಪುರ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಂಡೆ ಇದ್ದಿದ್ದರೆ.ಯಾವತ್ತೋ ಆ ಬಂಡೆಗಳನ್ನು ಎಲ್ಲಾ ಹೊಡೆಯುತ್ತಿದ್ದರು. 7 ವರ್ಷ ಸಂಸದರಾಗಿದ್ದರೂ ಅಲ್ವ ಏನು ಕೆಲಸ ಮಾಡಿದ್ದಾರೆ ಹೇಳಲಿ ನೋಡೊಣ. 5 ವರ್ಷ ಅವರ ಸರ್ಕಾರವೇ ಇತ್ತಲ್ಲ ಯಾವೆಲ್ಲಾ ಕೆಲಸಗಳನ್ನು ಮಾಡಿದ್ದರು.ಅವರಿಂದ ನಾನು ಅಭಿವೃದ್ಧಿ ಬಗ್ಗೆ ಕಲಿಯಬೇಕಾ…? ಸತ್ತೆಗಾಲ ಯೋಜನೆ ಮೂಲಕ ಇಡೀ ಜಿಲ್ಲಗೆ 540 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ತರೋ ಯೋಜನೆ ಮಾಡಲಾಗ್ತಿದೆ.ಜನರ ಬದುಕು ಕಟ್ಟಿಕೊಡುವ ಕೆಲಸ ಸಂಸದರು ಮಾಡುತ್ತಿಲ್ಲ ಜನರನ್ನು ಸಾಯಿಸಿ ವಿದ್ಯುತ್ ಚಿತಾಗಾರಕ್ಕೆ ತರ್ತಾರಲ್ಲ ಅಲ್ಲಿ ಹೋಗಿ ಪೋಟೊ ಹೊಡೆಸಿಕೊಂಡು ಪೋಜ್ ಕೊಡುತ್ತಾರೆ.

ರಾಮನಗರವನ್ನು ಜಿಲ್ಲೆ ಮಾಡಿ ತಪ್ಪು ಮಾಡಿದ್ರಿ‌ ಅಂತಾ ಇದೇ ಇವರ ಬ್ರದರ್ ಡಿಕೆ ಶಿವಕುಮಾರ್ ಹೇಳಿದರು ರಾಮನಗರ ಜಿಲ್ಲೆ ಮಾಡಿ ಮಹಾ ಅಪರಾಧ ಮಾಡಿದ್ರಿ ಅಂತಾ ಹೇಳಿದ್ದರು ಆದರೆ ‘ರಾಮನಗರ ಜಿಲ್ಲೆ ಮಾಡಬೇಕಾದರೆ ಎಲ್ಲಿದ್ದರು ಈ ಅಣ್ಣ ತಮ್ಮಂದಿರು ಇವರ ಹತ್ತಿರ ನಾನು ಆತ್ಮ ವಿಮರ್ಷೆ ಮಾಡಿಕೊಳ್ಳಬೇಕಾ…? ಜಿಲ್ಲೆ ಮಾಡಿದ್ರಿಂದ ಎಷ್ಟು ಅನುಕೂಲವಾಗಿದೆ.ಬೇರೆಯವರ ಆಸ್ತಿಗೆ ಬೇಲಿ ಹಾಕಿಕೊಳ್ತಿದ್ರಲ್ಲ ಅದನ್ನು ತಪ್ಪಿಸಿದ್ದಕ್ಕೆ ಆತ್ಮ ವಿಮರ್ಷೆ ಮಾಡಿಕೊಳ್ಳಬೇಕಾ..? ಎಂದು ಡಿಕೆ ಬ್ರದರ್ಸ್ ವಿರುದ್ದ ಮಾಜಿ ಸಿಎಂ ಹೆಚ್ಡಿಕೆ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES