ದೆಹಲಿ : ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರೈತರಿಗೆ ಬಂಪರ್ ಗಿಪ್ಟ್ ನೀಡಿದ್ದಾರೆ. ರೈತರಿಂದ 1200 ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿಗೆ ಒತ್ತು. 2.37 ಲಕ್ಷ ಕೋಟಿ ವೆಚ್ಚದಲ್ಲಿ ಗೋಧಿ, ಭತ್ತ ಖರೀದಿ. ಗಂಗಾ ನದಿ ಸುತ್ತ-ಮುತ್ತ 5 ಕಿಮೀ. ವ್ಯಾಪ್ತಿಯಲ್ಲಿ ಸಾವಯುವ ಕೃಷಿಗೆ ಒತ್ತು ನೀಡಲಾಗಿದೆ. ಎಣ್ಣೆ, ಕಾಳು ಬೆಳೆಯುವ ರೈತರಿಗೆ ಪ್ರೋತ್ಸಾಹಕ್ಕೆ ಕ್ರಮ ಕೈಗೊಳ್ಳಲಾಗಿದೆ. ಎಸ್,ಎಸ್‌ಟಿ ರೈತರಿಗೆ ಆರ್ಥಿಕ ನೆರವು. ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ. ಅರಣ್ಯ ಕೃಷಿ ಮಾಡುವವರಿಗೆ ಆರ್ಥಿಕ ನೆರವು ನೀಡಲಾಗುವುದು.
‘ಹರ್-ಘರ್ ನಲ್- ಜಲ್’ ಯೋಜನೆಯಡಿ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರಲಾಗುವುದು. 2 ವರ್ಷದಲ್ಲಿ 5.5 ಕೋಟಿ ಮನೆಗಳಿಗೆ ನಲ್ಲಿ ನೀರು ಪೂರೈಕೆ. ಒಟ್ಟು 7.5 ಕೋಟಿ ಮನೆಗಳಿಗೆ ನೀರು ಪೂರೈಕೆಯ ಗುರಿಯನ್ನು ಹೊಂದಲಾಗಿದೆ. ನಳ್ ಯೋಜನೆಗೆ 60 ಸಾವಿರ ಕೋಟಿ ಮೀಸಲಿಡಲಾಗಿದೆ.
2023ರೊಳಗೆ 18 ಲಕ್ಷ ಮನೆಗಳ ನಿರ್ಮಾಣ ಗುರಿಯನ್ನು ಹೊಂದಲಾಗಿದೆ. ಪಿಎಂ ಆವಾಸ್ ಯೋಜನೆಗೆ 48 ಸಾವಿರ ಕೋಟಿ ಅನುದಾನ ಬಿಡುಗಡೆ. ಈಶಾನ್ಯ ಭಾರತಕ್ಕೆ 1,500 ಕೋಟಿ ಅನುದಾನ ಬಿಡುಗಡೆ. ಒನ್ ನೇಷನ್ ಒನ್ ರಿಜಿಸ್ಟ್ರೇಷನ್ ವ್ಯವಸ್ಥೆ ಸ್ಥಾಪನೆ. ಆಸ್ತಿ ನೋಂದಣಿಗೆ ಡಿಜಿಟಲ್ ವ್ಯವಸ್ಥೆ ಜಾರಿ. ಆಸ್ತಿ ನೋಂದಣಿಗೆ ಒಂದು ದೇಶ, ಒಂದು ನೋಂದಣಿ ಜಾರಿ. 8 ಭಾಷೆಗಳಲ್ಲಿ ಆಸ್ತಿ ನೋಂದಣಿಗೆ ಏಕರೂಪದ ವ್ಯವಸ್ಥೆ ಜಾರಿ