Monday, December 23, 2024

ಬೆಂಗಳೂರಲ್ಲಿ ಮತ್ತೊಂದು ಬಸ್​ಗೆ ಬೆಂಕಿ; ಸುಟ್ಟು ಕರಕಲಾದ ಬಸ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಬಿಎಂಟಿಸಿ ಹೊತ್ತಿ ಉರಿಯುವುದು ಸಾಮಾನ್ಯವಾಗಿಬಿಟ್ಟಿದೆ! ದಿನಕ್ಕೊಂದು ಬಸ್ ಹೊತ್ತಿ ಉರಿಯುವುದು ನೋಡಿದರೆ ಬಿಎಂಟಿಸಿ ಇನ್ನು ಕೆಲವೇ  ದಿನಗಳಲ್ಲಿ ದಿವಾಳಿಯಾಗುವುದರಲ್ಲಿ ಸಂಶಯವಿಲ್ಲ. ಜನರೂ ಸಹ ಅಷ್ಟೆ, ವಿಮಾನ ದುರ್ಘಟನೆಯಲ್ಲಿ ಬೇಕಾದರೂ ಬದುಕಿ ಬರಬಹುದು ಆದರೆ ಬಿಎಂಟಿಸಿಯಲ್ಲಿ ಪ್ರಯಾಣಿಸುವಾಗ ನಮ್ಮ ಜಾಗಕ್ಕೆ ಹೋಗಿ ಸೇರುತ್ತೇವೆ ಅನ್ನೋ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ!

ಗಾರ್ಡನ್ ಸಿಟಿಯ ಜಯನಗರದ 4ನೇ ಸೌತ್ ಎಂಡ್ ಸರ್ಕಲ್ ಬಳಿ ಬಿಎಂಟಿಸಿ ಬಸ್ ಮತ್ತೊಮ್ಮೆ ಧಗ ಧಗ ಹೊತ್ತಿ ಉರಿದಿದೆ. ಇತ್ತೀಚೆಗಷ್ಟೇ ಚಾಮರಾಜಪೇಟೆಯಲ್ಲಿ ಇದ್ದಕ್ಕಿದ್ದಂತೆಯೇ ಬಿಎಂಟಿಸಿ ಬಸ್ ಹೊತ್ತಿ ಉರಿದಿತ್ತು. ಆ ಘಟನೆಯ ಕಹಿನೆನಪು ಮಾಸುವ ಮುನ್ನವೇ ಅದೇ ರೀತಿಯ ಅವಘಡ ಜಯನಗರದಲ್ಲಾಗಿದೆ. ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಈ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ. ಸದ್ಯ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ ಬೆಂಕಿ ನಂದಿಸಿದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಬಹುಶಃ ಇಂತದೆ ಘಟನೆಗಳು ಮತ್ತೆ ಮತ್ತೆ ಮರುಕಳಿಸಿ ಪ್ರಾಣಹಾನಿಯಾಗುವವರೆಗೂ ಬಿಎಂಟಿಸಿ ಇದರ ಬಗ್ಗೆ ಗಂಭೀರವಾಗಿ ಯೋಚಿಸುವುದಿಲ್ಲವೆ?

RELATED ARTICLES

Related Articles

TRENDING ARTICLES