ನವದೆಹಲಿ:ಸೆಂಟ್ರಲ್ ಹಾಲ್ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ವರ್ಷದ ಮೊದಲ ಹಂತದ ಬಜೆಟ್ ಅಧಿವೇಶನ ಆರಂಭಗೊಂಡಿದೆ.
ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಮನಾಥ್ ಕೋವಿಂದ್ ಕೇಂದ್ರ ಸರ್ಕಾರ ಹೊಸ ಯೋಜನೆಯ ಫಲವಾಗಿ ಇಂದು ಅಂರ್ತಜಾಲ ನಮಗೆ ಸುಲಭವಾಗಿ ಸಿಗುತ್ತಿದೆ.ಇದರಿಂದ ಯುವ ಪೀಳಿಗೆಗೆ ಭಾರಿ ಲಾಭವಾಗುತ್ತಿದೆ.ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ದೇಶವಾಗಿ ಹೊರಹೊಮ್ಮಿದೆ.ಇದರಿಂದ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಕ್ಕಿದೆ ಎಂದರು.
ರಾಷ್ಟ್ರಪತಿಗಳ ಭಾಷಣದ ಮುಖ್ಯಾಂಶಗಳು
ದೇಶದಲ್ಲಿ ಖಾದಿ ಮಾರಾಟ ಮೂರು ಪಟ್ಟು ಹೆಚ್ಚಾಗಿದೆ.
ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ.
ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಬೆಲೆ ಭಾರತದಲ್ಲಿ ಅಗ್ಗವಾಗಿದೆ.
ಕೃಷಿ ರಫ್ತಿನಲ್ಲಿ ಶೇಖಡಾ 25ರಷ್ಟು ಏರಿಕೆಯಾಗಿದೆ.
44 ಕೋಟಿಗೂ ಹೆಚ್ಚು ಬಡವರಿಗೆ ನೇರ ನಗದು ವರ್ಗಾವಣೆಯ ಪ್ರಯೋಜನೆ ಸಿಕ್ಕಿದೆ.
ಭಾರತ ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಗಳಿಗೆ ಒತ್ತು ನೀಡಿದೆ.
ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ಸಹಾಯಕ್ಕೆ ಭಾರತ ಮುಂದಾಗಿದೆ.
ತ್ರಿವಳಿ ತಲಾಖ್ ಅಪರಾಧ ಎಂದು ಕೇಂದ್ರ ಸರ್ಕಾರ ಫೋಷಿಸಿ ಹೊಸ ಕಾನೂನು ಜಾರಿ ಮಾಡಿದೆ ಇದರ ಲಾಭ ಹೆಣ್ಣು ಮಕ್ಕಳಿಗೆ ಆಗಿದೆ.