Monday, December 23, 2024

‘ಓ ಮಿತ್ರೋಂ’ ಗೆ ಶಶಿ ತರೂರ್ ವ್ಯಂಗ್ಯ

ನವದೆಹಲಿ: ದೇಶದಲ್ಲಿ ಹರಡುತ್ತಿರುವ ಒಮಿಕ್ರಾನ್ ವೈರಾಣುವಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮೆಲ್ಲಾ ಭಾಷಣಗಳಲ್ಲಿ ಹೇಳುವ ‘ಓ ಮಿತ್ರೋಂ’ (ಓ ಮಿತ್ರರೇ) ಎಂಬ ಪದ ತುಂಬಾ ಅಪಾಯಕಾರಿಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ವ್ಯಂಗ್ಯವಾಡಿದ್ದಾರೆ.

ಶಶಿ ತರೂರ್ ಅವರು ಪ್ರಧಾನಿಯವರ ಓ ಮಿತ್ರೋಂ ಪದವನ್ನು ಒಮಿಕ್ರಾನ್ ಕೊರೊನಾ ವೈರಾಣುವಿಗೆ ಹೋಲಿಸಿದ್ದಾರೆ. ಕೊರೋನಾ ವೈರಾಣುಗಳ ಪೈಕಿ ಸುರ್ಬಲ ವೈರಾಣು, ಶಕ್ತಿಶಾಲಿ ವೈರಾಣು ತಳಿ ಎಂದು ಇರುತ್ತದೆ. ಆದರೆ ಓ ಮಿತ್ರೋಂ ಪೈಕಿ ದುರ್ಬಲ ಯಾವುದೂ ಇಲ್ಲ. ಕೋಮು ಸೌಹಾರ್ದತೆಗೆ ಧಕ್ಕೆ, ಧರ್ಮಾಂಧತೆಗೆ ‘ಓ ಮಿತ್ರೋಂ’ ಕಾರಣವಾಗಿದೆ. ಅದರಿಂದಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೆಟ್ಟು ಬೀಳುತ್ತಿದೆ ಎಂದು ಶಶಿ ತರೂರ್ ಟ್ವೀಟ್ ನಲ್ಲಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES