Wednesday, January 22, 2025

ನಲ್​ಪಾಡ್​ಗೆ ಆಟ; ಕಾಂಗ್ರೆಸ್​ಗೆ ಪ್ರಾಣಸಂಕಟ!

ಬೆಂಗಳೂರು: ದೇಶ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವಾಗ, ಆಡಳಿತ ಪಕ್ಷ ದುರಾಡಳಿತ ಮಾಡುವಾಗ, ಇಡೀ ದೇಶದಲ್ಲಿ ಯುವಜನತೆ ನಿರುದ್ಯೋಗದ, ಹಸಿವಿನ ಸಮಸ್ಯೆಯಲ್ಲಿ ಸಿಕ್ಕಿ ಒದ್ದಾಡುವಾಗ, ಬಿಹಾರದ ನಿರುದ್ಯೋಗಿ ಯುವಕರಂತೂ ಇಡೀ ರಾಜ್ಯವನ್ನೇ ಒಂದು ದಿನ ಬಂದ್ ಮಾಡಿರುವಾಗ, ನಮ್ಮ ಕರ್ನಾಟಕದ ಕಾಂಗ್ರೆಸ್ ಯುತ್ ಭವಿಷ್ಯದ ಅಧ್ಯಕ್ಷ ನಲಪಾಡ್ ಮಾತ್ರ ಹುಟ್ಟುಹಬ್ಬ ಆಚರಿಸಿಕೊಂಡು, ಅಧಿಕಾರ ಸಿಗುವ ಒಂದು ದಿನ ಮುಂಚೆಯೇ ಕಛೇರಿ ಪೂಜೆ ಮಾಡಿಕೊಂಡು ಸಂಭ್ರಮದಲ್ಲಿದ್ದಾರೆ!

ಈ ಹಿನ್ನೆಲೆಯಲ್ಲಿ ‘ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿದರಂತೆ’ ಎಂಬ ಮತ್ತು ‘ರೋಮ್ ಹೊತ್ತಿ ಉರಿಯುವಾಗ ನೀರೊ ಪಿಟೀಲು ಕೊಯ್ತಿದ್ದನಂತೆ’ ಎಂಬೆರಡು ಪ್ರಸಿದ್ಧ ಗಾದೆಮಾತುಗಳು ನಲ್​ಪಾಡ್​ಗೆ ಸರಿಯಾಗಿ ಹೊಂದುತ್ತವೆ. ಯುತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಾಳೆ ನಲ್​ಪಾಡ್​ಗೆ ರಕ್ಷಾರಾಮಯ್ಯ ಹಸ್ತಾಂತರಿಸಬೇಕು. ಆದರೆ ತಮ್ಮ ಕೈಗೆ ಅಧಿಆರ ಬರುವವರೆಗೂ ಕಾಯುವ ತಾಳ್ಮೆ ನಲ್​ಪಾಡ್​ಗಿಲ್ಲ. ಆದ್ದರಿಂದ ಒಂದು ದಿನ ಮುಂಚೆಯೇ ಕಚೇರಿ ಪೂಜೆ ಹಮ್ಮಿಕೊಂಡು ಕಾಂಗ್ರೆಸ್ ಕಚೇರಿಯನ್ನು ಪೂಜೆ ಮಾಡಿದ್ದಾರೆ ನಲ್​ಪಾಡ್. ಕೊಟ್ಟಿರುವ ಕಾರಣ ಮಾತ್ರ ಬೇರೆ! ನಾಳೆ ಅಮಾವಾಸ್ಯೆ ಹಿನ್ನೆಲೆ ಇಂದೇ ಪೂಜೆ ಆಚರಿಸಿದ್ದಾರೆ.

ಇದಕ್ಕೂ ಒಂದು ದಿನ ಮುಂಚೆ ಅಂದರೆ ಶನಿವಾರ ನಲ್​ಪಾಡ್ ಹುಟ್ಟುಹಬ್ಬ. ದೇಶದಲ್ಲಿ ಎಷ್ಟು ಸಮಸ್ಯೆಯಿದ್ದರೇನಂತೆ, ಯುವನಾಯಕನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ಸಾಧ್ಯವೆ? ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ನಲಪಾಡ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಅದಕ್ಕೆ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ನಿಖಿಲ್ ಕೊಂಡಜ್ಜಿ ಕೂಡ ಜೋಶ್ ಸ್ಟೆಪ್ಸ್ ಹಾಕಿ ಸಾಥ್ ನೀಡಿದ್ದಾರೆ! ಇದೆಲ್ಲ ರಾಹುಲ್ ಗಾಂಧಿಗೆ ಗೊತ್ತಾದರೆ ಅವರ ರಿಯಾಕ್ಷನ್ ಹೇಗಿರಬಹುದು?!

ಓಂಪ್ರಕಾಶ್ ನಾಯಕ್, ಪವರ್ ಟಿವಿ

RELATED ARTICLES

Related Articles

TRENDING ARTICLES