Monday, December 23, 2024

ತಮ್ಮದೇ ಪಕ್ಷದ ನಾಯಕರ ವಿರುದ್ಧ ಕಟೀಲ್‌ ಗರಂ

ಬೆಂಗಳೂರು : ಮೈಸೂರು ಸಂಸದ ಪ್ರತಾಪ್ ಸಿಂಹ ಪರವಾಗಿ ನಿಂತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಶಾಸಕ ಎಲ್. ನಾಗೇಂದ್ರ ಹಾಗೂ ರಾಮದಾಸ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಗ್ಯಾಸ್ ಲೈನ್ ಎಳೆಯೋ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕರುಗಳು ಹಾಗೂ ಸಂಸದ ಪ್ರತಾಪ್ ಸಿಂಹ ನಡುವೆ ವಾಕ್ಸಮರವಾಗಿತ್ತು. ಈ ವಿಷಯವಾಗಿ ಪ್ರತಿಕ್ರಿಯಿಸಿದ ಶಾಸಕ ಎಲ್. ನಾಗೇಂದ್ರ ಗ್ಯಾಸ್ ಲೈನ್ ಅಳವಡಿಸುವಲ್ಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಯಾಕೆ ಇಷ್ಟೊಂದು ಇಂಟ್ರೆಸ್ಟ್ ಅಂತ ಕಾಲೆಳೆದಿದ್ದಾರೆ. ಮತ್ತೊಂದು ಕಡೆ ಮೈಸೂರು ಅಭಿವೃದ್ಧಿ ದೃಷ್ಟಿಯಲ್ಲಿ ನಾನು ಮಹಾರಾಜರ ಸಮಾನ ಅಂತ ಹೇಳಿಕೊಂಡಿದ್ದರು ಪ್ರತಾಪ್ ಸಿಂಹ.

ಹೀಗಾಗಿ ಸಂಸದರನ್ನ ಬಿಟ್ಟು, ಶಾಸಕರಿಗೆ ಮಾತ್ರ ವಾರ್ನಿಂಗ್ ನೀಡಿದ ರಾಜ್ಯಾಧ್ಯಕ್ಷ ಕಟೀಲ್. ವಾಕ್ಸಮರದಿಂದ ಪಕ್ಷದ ಇಮೇಜ್‌ಗೂ ಡ್ಯಾಮೇಜ್ ಆಗುತ್ತೆ ಎಂದು ತಿಳುವಳಿಕೆ ನೀಡಿದ್ದಾರೆ. ಹಾಗೂ ಯಾರೂ ಈ ವಿಚಾರವಾಗಿ ಹೇಳಿಕೆ ನೀಡದಂತೆ ಶಾಸಕರಿಬ್ಬರಿಗೆ ಸೂಚನೆ ನೀಡಿದ್ದಾರೆ.  ಮತ್ತು ಯಾವುದೆ ರೀತಿಯ ಅಸಂಬದ್ದ ಹೇಳಿಕೆಗಳನ್ನ ನೀಡದಂತೆ ಎಲ್.ನಾಗೇಂದ್ರ ಹಾಗೂ ರಾಮ್‌ದಾಸ್‌ಗೆ ಕರೆ ಮಾಡಿ ನಳೀನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ. ಮತ್ತು ಅಶಿಸ್ತು ಮುಂದುವರೆಸಿದರೆ ಕ್ರಮ ತೆಗೆದುಕೊಳ್ಳೋ ಎಚ್ಚರಿಕೆ ಕೂಡ ನೀಡಿದ್ದಾರೆ.

RELATED ARTICLES

Related Articles

TRENDING ARTICLES