Monday, December 23, 2024

‘ಡಿಕೆಶಿ ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಹಾಳು ಮಾಡ್ತಿದ್ದಾರೆ’

ಬೆಂಗಳೂರು : ಸಿದ್ದರಾಮಯ್ಯ ಹಾಗೂ ಅಶೋಕ್ ಪಟ್ಟಣ್ ನಡುವಿನ ಪಿಸು ಪಿಸು ಮಾತು ಹಿನ್ನೆಲೆ ವಿಚಾರವಾಗಿ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ಸಿನ ಬೀದಿ ಜಗಳ ಬಯಲಿಗೆ ಬಂದಿದೆ. ಸಿದ್ದರಾಮಯ್ಯ, ಅಶೋಕ್ ಪಟ್ಟಣ್​​​ನ‌ ಪಿಸು ಮಾತುಗಳು ಮಾಧ್ಯಮಗಳಿಂದ ಗೊತ್ತಾಗಿದೆ. ಪಾದಯಾತ್ರೆಯನ್ನು ಡಿಕೆಶಿ ಅವರು ವೈಯಕ್ತಿಕ ವರ್ಚಸ್ಸುಗಾಗಿ ಮಾಡಿದ್ದಾರೆ, ಇದರ‌ ಬಗ್ಗೆ ನಾವು ಕೇಳಿದಾಗ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಅಂದರು. ಆದರೆ ಈಗ ಇವರ ಮಾತಿನಿಂದಲೇ ಅವರ ಬೀದಿ‌ ಜಗಳ ಬೀದಿಗೆ ಬಂದು ನಿಂತಿದೆ.

ಡಿಕೆಶಿ ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಹಾಳು ಮಾಡ್ತಿದ್ದಾರೆಂಬ ಮಾತು ಸಿದ್ದರಾಮಯ್ಯರಿಂದಲೇ ಗೊತ್ತಾಗಿದೆ. ಇವರ ಈ ಒಳ ಜಗಳ ಬೇಗುದಿಯಿಂದ ಕಾಂಗ್ರೆಸ್ ನಲುಗಿ ಹೋಗಿದೆ. ತಿರುಕನ ಕನಸ್ಸು ಕಾಣುವ ಅವರು ಈ ಒಳ ಜಗಳದಿಂದ ಆಚೆ ಬಂದ್ರೆ ಸಾಕಾಗಿದೆ ಎಂದು ಬೆಂಗಳೂರಲ್ಲಿ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.

ರಾಮ್ ದಾಸ್ ಹಾಗೂ ಪ್ರತಾಪ್ ಸಿಂಹ ನಡುವೆ ವಾರ್ ವಿಚಾರಕ್ಕೇ ಪ್ರತಿಕ್ರಿಯಿಸಿ ಅದು ಅಭಿವೃದ್ಧಿಯ ಜಗಳವೇ, ಹೊರತು ಪಕ್ಷದದ ಜಗಳವಲ್ಲ ಎಂದರು. ಹಾಗೂ ನಿಮ್ಮ ಪಕ್ಷದಲ್ಲಿ ಒಳ‌ ಜಗಳವಿಲ್ಲವೇ, ಸಚಿವರ ಮೇಲೆ ನಿಮ್ಮ ಶಾಸಕರು ದೂರು ಕೊಟ್ಟಿದ್ದಾರೆಂಬ ಪ್ರಶ್ನೆಗೆ,ಆರ್​​ ಅಶೋಕ್ ಮೌನವಾದರು.

RELATED ARTICLES

Related Articles

TRENDING ARTICLES