Wednesday, January 22, 2025

ಡಿಕೆಶಿ ಸಿದ್ದರಾಮಯ್ಯ ಎಣ್ಣೆ ನೀರು ಇದ್ದಂತೆ : ಸಚಿವ ಗೋವಿಂದ ಕಾರಜೋಳ

ಬಾಗಲಕೋಟೆ : ಕಾಂಗ್ರೆಸ್​​ ಪಕ್ಷದವರಾದ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್​ ವೈಮನಸ್ಸು ವಿಚಾರವಾಗಿ ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ.

ಡಿಕೆಶಿ & ಸಿದ್ದರಾಮಯ್ಯ ಎಣ್ಣೆ ನೀರು ಇದ್ದಂತೆ ಅವರೆಂದೂ ಕೂಡಲಿಕ್ಕೆ ಸಾಧ್ಯವೇ ಇಲ್ಲ. ಅವರಲ್ಲಿಯೇ ಒಡಕುಗಳಿವೆ ಎಂದರು. ಕಾಂಗ್ರೆಸ್​​ನಲ್ಲಿ ಅವರವರಲ್ಲೇ ಮೂರು ಗುಂಪುಗಳಿವೆ. ಅಲ್ಲದೇ ಕಾಂಗ್ರೆಸ್ ಸ್ಥಿತಿ ಈಗ ಗಂಭೀರವಾಗಿ ಇದೆ. ಪರಮೇಶ್ವರ, ಖಗೆ೯ ಅವರದೇ ಒಂದು ಗುಂಪು ಇದೆ, ಅವರ ಜೊತೆಯಲ್ಲಿಯೇ ಶಾಮನೂರು ಶಿವಶಂಕ್ರಪ್ಪ ಸಹ ಇದ್ದಾರೆ. ಹೀಗಾಗಿ ಕಾಂಗ್ರೆಸ್ ಸ್ಥಿತಿ ಮುಂದೆ ಏನಾಗುತ್ತದೆ ಎಂದು ನೀವೆ ಕಾದು ನೋಡಿ.

ಬಳಿಕ ಮಾತನಾಡಿದ ಅವರು, ಯೋಜನೆಗಳಿಗೆ ಹೆಸರು ಬದಲಿಸಿದ್ದೇ ಬಿಜೆಪಿಯ ಸಾಧನೆ ಎಂದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಜನ ಹೀನಾಯವಾಗಿ ಸೋಲಿಸಿದರು. ಇದನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಕಾಲದಲ್ಲಿ ಕೊರೊನಾ, ಪ್ರವಾಹ ಇರಲಿಲ್ಲ. ಆದರೂ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಸಿದ್ದರಾಮಯ್ಯ ಏನು ಮಾಡಿಲ್ಲವೆಂದು ಹೇಳಿ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್​​​ನ್ನ ಹೀನಾಯವಾಗಿ ಸೋಲಿಸಿದ್ದಾರೆ ಅದನ್ನ ಅವರೇ ಅಥ೯ಮಾಡಿಕೊಳ್ಳಬೇಕು. ಅಲ್ಲದೆ ನಮ್ಮ ಪಕ್ಷ ಹಾಗೂ ನಾವು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆಯನ್ನು ನೀಡಿದ್ದಾರೆ.

RELATED ARTICLES

Related Articles

TRENDING ARTICLES