Thursday, April 3, 2025

ಸಿದ್ದರಾಮಯ್ಯಗೆ ಅಶೋಕ್ ತಿರುಗೇಟು

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಒಂದು ಚಟಾ ಎಲ್ಲದಕ್ಕೂ ಒಂದು ರಿಯಾಕ್ಷನ್ ಕೊಡಬೇಕು ಎಂಬುದು ಚಟ ಸರ್ಕಾರ ಏನು ಸಾಧನೆ ಮಾಡಿಲ್ಲ ಎಂದು ಹೇಳಿದ್ದಾರೆ.

ಅವರಿಗೆ ನಾನು ಮಾಡಿದ್ದು ಸರಿ ಎಂದು ಭಾವಿಸಿದ್ದಾರೆ‌.ಹೆಚ್ಚು ಬಜೆಟ್ ಮಂಡನೆ ಮಾಡಿದ್ದೇನೆ ಎಂಬ ಅಹಂ ಸಿದ್ದರಾಮಯ್ಯಗೆ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡ್ತಾರೆ‌.ಸಿಕ್ಕ ಆರೇ ತಿಂಗಳಲ್ಲಿ ಸಿಎಂ ಒಳ್ಳೆಯ ಕೆಲಸ ಮಾಡಿದ್ದಾರೆ‌.ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿದರು ಆದರೆ ಏನು ಕೆಲಸ ಮಾಡಿಲ್ಲ.ಹಾಗಾಗಿ‌ ಜನ  ಕಾಂಗ್ರೆಸ್ ತಿರಸ್ಕರಿಸಿದರು.ಆದ್ದರಿಂದ 78 ಸ್ಥಾನಕ್ಕೆ ಬಂದರು.ಹದಿನೇಳು ಜನ ಕಾಂಗ್ರೆಸ್ ಬಿಟ್ಟು ಬಂದರು ಎಂದರು.

ಕಾಂಗ್ರೆಸ್ ಇದರ ಬಗ್ಗೆ ಸತ್ಯ ಶೋಧನ ಸಮಿತಿ ಮಾಡಬೇಕಿತ್ತು.ಸಮಿತಿ ಮಾಡಿ ಯಾಕೆ ಬಿಟ್ಟು ಬಂದ್ರು ಎಂದು ತಿಳಿಯಬೇಕಿತ್ತು.ಮೊನ್ನೆ ಇಬ್ರಾಹಿಂ ಅವರು ಕಾಂಗ್ರೆಸ್ ಗುಡ್ ಬೈ ಮಾಡಿದರು.ಕಾಂಗ್ರೆಸ್ ಹಿರಿಯ ನಾಯಕ ಇಬ್ರಾಹಿಂ ಕಾಂಗ್ರೆಸ್ ಸಿದ್ದರಾಮಯ್ಯ, ಡಿಕೆಶಿ ಶೋ ನಡೆಯುತ್ತಿದೆ‌.ಅವರಿಬ್ಬರ ನಡುವೆ ಸ್ಪರ್ಧೆ  ಹೊಟೇಲ್ ಗಳ ಮುಂದೆ ಟೂ ಡೇ ಸ್ಪೆಷಲ್ ಎಂದು ಬೋರ್ಡ್ ಇರುತ್ತೋ ಹಾಗೇಯೆ ಸಿದ್ದು, ಡಿಕೆಶಿ ನಡುವೆ ಟೂ ಡೇ ಸ್ಪೆಷಲ್ ಎಂದು ತಿರುಗೇಟು ನೀಡಿದರು.

RELATED ARTICLES

Related Articles

TRENDING ARTICLES