Monday, May 20, 2024

ಚೀನಾದಿಂದ ಭಾರತದ ಭೂಮಿಯನ್ನು ಯಾವಾಗ ತರುತ್ತೀರಿ ಮೋದಿಜಿ?-ರಾಗ

ನವದೆಹಲಿ: ಚೀನಾ ಆಕ್ರಮಿಸಿಕೊಂಡಿರುವ ಭಾರತದ ಭೂಮಿಯನ್ನು ಯಾವಾಗ ಹಿಂತಿರುಗಿ ತರುತ್ತಿದ್ದೀರಿ ಮೋದಿಯವರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ. ನಾಪತ್ತೆಯಾಗಿರುವ ಅರುಣಾಚಲದ ಯುವತಿ ಮಿರಾಮ್ ಟ್ಯಾರೋನ್ ಅನ್ನು ಚೀನಾ ಭಾರತಕ್ಕೆ ಹಿಂತಿರುಗಿಸಿದ ನಂತರ ರಾಹುಲ್ ಈ ಟ್ವಿಟ್ ಮಾಡಿದ್ದಾರೆ.

ಅರುಣಾಚಲ ಪ್ರದೇಶದ ಹದಿಹರೆಯದ ಯುವತಿ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ನಂತರ ಚೀನಿಯರು ಅವಳನ್ನು ಪತ್ತೆ ಮಾಡಿದ್ದರು. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಗುರುವಾರ ಅವರನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ.

ಲಡಾಖ್​ನಲ್ಲಿರುವ ಬಿಕ್ಕಟ್ಟಿನ ಕುರಿತು ರಾಹುಲ್ ಗಾಂಧಿಯವರು ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಮತ್ತು ಪ್ರಧಾನಿಯವರು ಭಾರತದ ಭೂಮಿಯನ್ನು ಚೀನಾಕ್ಕೆ ಸರೆಂಡರ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

RELATED ARTICLES

Related Articles

TRENDING ARTICLES