Tuesday, January 14, 2025

ಟಾಟಾ ಓಪನ್ ಟೆನಿಸ್; ರಾಮ್​ಕುಮಾರ್​ಗೆ ವೈಲ್ಡ್ ಕಾರ್ಡ್​ ಎಂಟ್ರಿ

ಪುಣೆ: ಜನವರಿ 31ರಿಂದ ಫೆಬ್ರವರಿ 6ರವರೆಗೆ ಪುಣೆಯ ಬಾಲೆವಾಡಿ ಸ್ಟೇಡಿಯಂನಲ್ಲಿ ನಡೆಯಲಿರುವ ಬಹುನಿರೀಕ್ಷಿತ 2022 ಟಾಟಾ ಓಪನ್ ಮಹಾರಾಷ್ಟ್ರದ ಸಿಂಗಲ್ಸ್ ಟೆನಿಸ್ ಮುಖ್ಯ ಡ್ರಾದಲ್ಲಿ ಅಗ್ರ ಶ್ರೇಯಾಂಕದ ಭಾರತೀಯ ಟೆನಿಸ್ ಆಟಗಾರ ರಾಮ್​ಕುಮಾರ್ ರಾಮನಾಥನ್ ಗುರುವಾರ ವೈಲ್ಡ್​ಕಾರ್ಡ್​ ಎಂಟ್ರಿ ಪಡೆದರು.

ರಾಮ್​ಕುಮಾರ್ ಕಳೆದ ವರ್ಷ ನವೆಂಬರ್​ನಲ್ಲಿ ಬಹ್ರೇನ್​ನ ಮನಾಮದಲ್ಲಿ ತಮ್ಮ ಮೊದಲ ಎಟಿಪಿ ಚಾಲೆಂಜರ್ ಪ್ರಶಸ್ತಿಯನ್ನು ಗೆದ್ದಿದ್ದರು ಮತ್ತು ಟಾಪ್ 200ರಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆದಿದ್ದರು. 2017ರಲ್ಲಿ ವಿಶ್ವದ ನಂಬರ್ 8 ಆಟಗಾರನಾಗಿರುವ ಡೊಮಿನಿಕ್ ಥೀಮ್ ಅವರನ್ನು ನೇರ ಸೆಟ್​ಗಳಲ್ಲಿ ಸೋಲಿಸಿದ್ದರು.

RELATED ARTICLES

Related Articles

TRENDING ARTICLES