Monday, December 23, 2024

ಪ್ರೊ ಕಬಡ್ಡಿ ಲೀಗ್; ಅಗ್ರಸ್ಥಾನದಲ್ಲಿ ಬೆಂಗಳೂರು ಬುಲ್ಸ್

ಬೆಂಗಳೂರು: ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನ 79ನೇ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ ಪುಣೇರಿ ಪಲ್ಟನ್ 44-38 ಅಂಕಗಳ ಅಂತರದಿಂದ ಗೆದ್ದು ಬೀಗಿದೆ. 14 ಪಂದ್ಯಗಳಲ್ಲಿ ಪುಣೇರಿ ಸಾಧಿಸಿದ 7ನೇ ಜಯ ಇದಾಗಿದೆ. ಆದರೆ ಯೋಧಾ ಇಷ್ಟೇ ಪಂದ್ಯಗಳಿಂದ 6ನೇ ಸೋಲನುಭವಿಸಿತು. ಐದನ್ನು ಮಾತ್ರ ಗೆದ್ದಿರುವ ಯೋಧಾ, ಮೂರನ್ನು ಟೈ ಮಾಡಿಕೊಂಡಿದೆ.

ಈ ಪಂದ್ಯದಲ್ಲಿ ಗೆದ್ದ ಮತ್ತು ಸೋತ ತಂಡದ ಅಂಕ ದೊಡ್ಡ ಮಟ್ಟದಲ್ಲೇನು ಬದಲಾವಣೆ ಆಗಿಲ್ಲ. ಯುಪಿ ಯೋಧಾ ಪಾಯಿಂಟ್ ಟೇಬಲ್​ನಲ್ಲಿ ಏಳನೇ ಸ್ಥಾನದಲ್ಲಿದ್ದರೆ ಪುಣೇರಿ 8ನೇ ಸ್ಥಾನದಲ್ಲಿದೆ. 46 ಅಂಕದೊಂದಿಗೆ ಬೆಂಗಳೂರು ಬುಲ್ಸ್ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಡೆಲ್ಲಿ, ಮೂರನೇ ಸ್ಥಾನದಲ್ಲಿ ಹರಿಯಾಣ ಸ್ಟೀಲರ್ಸ್ ಸ್ಥಾನ ಪಡೆದಿದೆ.

RELATED ARTICLES

Related Articles

TRENDING ARTICLES