ಹಾಫ್ ಹೆಲ್ಮೆಟ್ ನಿಷೇಧಿಸುವಂತೆ ನಿಮ್ಹಾನ್ಸ್ ಸರ್ಕಾರಕ್ಕೆ ಶಿಫಾರಸ್ಸು ಬಂದಿದೆ. ಬರೋಬ್ಬರಿ 1 ಲಕ್ಷ ಬೈಕ್ ಸವಾರರ ಸರ್ವೇ ನಡೆಸಿರೋ ನಿಮ್ಹಾನ್ಸ್ ವೈದ್ಯ ತಂಡ ಹೆಲ್ಮೆಟ್ ಇದ್ದಿದ್ದರೆ ಪ್ರಾಣ ಉಳೀತಿತ್ತು ಎಂದು ಅಪಘಾತಗಳ ವೈಖರಿ ನೋಡಿ, ಆತಂಕಕಾರಿ ವಿಚಾರವನ್ನು ಬಯಲು ಮಾಡಿದೆ.
ಕಮೀಷನರ್ ಡಾ. ರವಿಕಾಂತೇಗೌಡ ನೇತೃತ್ವದ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಒಂದಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಈ ಮಧ್ಯೆ ಹಾಫ್ ಹೆಲ್ಮೆಟ್ ನಿಷೇಧಿಸುವಂತೆ ನಿಮ್ಹಾನ್ಸ್ ಸರ್ಕಾರಕ್ಕೆ ಶಿಫಾರಸ್ಸು ಬಂದಿದೆ. ಬರೋಬ್ಬರಿ 1 ಲಕ್ಷ ಬೈಕ್ ಸವಾರರ ಸರ್ವೇ ನಡೆಸಿರೋ ನಿಮ್ಹಾನ್ಸ್ (NIMHANS) ವೈದ್ಯ ತಂಡ ಹೆಲ್ಮೆಟ್ ಇದ್ದಿದ್ದರೆ ಪ್ರಾಣ ಉಳೀತಿತ್ತು ಎಂದು ಅಪಘಾತಗಳ ವೈಖರಿ ನೋಡಿ, ಆತಂಕಕಾರಿ ವಿಚಾರವನ್ನು ಬಯಲು ಮಾಡಿದೆ. ನಿಮ್ಹಾನ್ಸ್ ಮತ್ತು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರಿಂದ ನಡೆದ ಜಂಟಿ ಸರ್ವೇ ಕಾರ್ಯ ಇದಾಗಿದೆ.