Monday, December 23, 2024

ಜೂಟ್​ಮಿಲ್ ಕಾರ್ಮಿಕರಿಂದ ರೈಲುತಡೆ

ಭಾತ್ಪಾರಾ (ಪಶ್ಚಿಮ ಬಂಗಾಳ): ಮುಂದಿನ ಸೂಚನೆ ಬರುವವರೆಗೂ ‘ತಾತ್ಕಾಲಿಕ ಕೆಲಸವನ್ನು ಅಮಾನತುಗೊಳಿಸಿದ’ ನಂತರ ಉತ್ತರ 24 ಪರಗಣದ ಕಂಕಿನಾರಾ ಆರ್​ಎಸ್​ನಲ್ಲಿ ಜೂಟ್​ಮಿಲ್ ಕಾರ್ಮಿಕರು ಗುರುವಾರ ರೈಲು ತಡೆಯನ್ನು ನಡೆಸಿದರು.

ಜೂಟ್​ಮಿಲ್ ಕಾರ್ಮಿಕರೊಬ್ಬರ ಪ್ರಕಾರ “ಕಚ್ಚಾ ಸೆಣಬಿನ ಅಲಭ್ಯತೆಯನ್ನು ತೋರಿಸಿ ಆಗಾಗ ಈ ರೀತಿ ಕೆಲಸವನ್ನು ನಿಲ್ಲಿಸಲಾಗುತ್ತದೆ. ಹೀಗೆ ಪದೇ ಪದೇ ಕೆಲಸ ನಿಲ್ಲಿಸುತ್ತಿರುವುದರಿಂದ ಕಾರ್ಖಾನೆ ಪ್ರಾರಂಭವಾದ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೇವಲ 7-8 ತಿಂಗಳು ಮಾತ್ರ ಕೆಲಸ ನಡೆದಿದೆ” ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES