Monday, December 23, 2024

ತ್ರಿಪುರಾದಲ್ಲಿ ನೂರಾರು ವಲಸೆ ಹಕ್ಕಿಗಳ ಸಾವು; ತನಿಖೆಗೆ ಆದೇಶ

ಅಗರ್ತಲಾ (ತ್ರಿಪುರ): ತ್ರಿಪುರಾದ ಗೋಮತಿ ಜಿಲ್ಲೆಯ ಉದಯಪುರದ ಖಿಲ್ಪಾರಾ ಪ್ರದೇಶದ ಸುಖ್​ಸಾಗರ್ ಸರೋವರದ ಪ್ರದೇಶದಿಂದ ನೂರಾರು ವಲಸೆ ಹಕ್ಕಿಗಳ ಮೃತದೇಹಗಳನ್ನು ಗುರುವಾರ ವಶಪಡಿಸಿಕೊಳ್ಳಲಾಗಿದೆ. ಕೆರೆಯ ಸಮೀಪ ಪಕ್ಷಿಗಳು ಸತ್ತಿರುವುದು ಕಂಡು ಬಂದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಘಟನಾ ಸ್ಥಳಕ್ಕೆ ಡಿಎಫ್​ಒ ಗೋಮತಿ ಮಹೇಂದ್ರ ಸಿಂಗ್ ನೇತೃತ್ವದ ಅರಣ್ಯ ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಂಗ್ ಅವರು ಈ ಘಟನೆಯ ಕುರಿತಾಗಿ ತನಿಖೆಗೆ ಆದೇಶಿಸಿದ್ದಾರೆ ಹಾಗೂ ಆ ಕುರಿತು ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವರದಿಯಾಗಿದೆ.

RELATED ARTICLES

Related Articles

TRENDING ARTICLES