Monday, December 23, 2024

ಮಾಜಿ ಸಿಎಂ ಬಿಎಸ್​ವೈ ಮೊಮ್ಮೊಗಳು ಸೌಂದರ್ಯ ಆತ್ಮಹತ್ಯೆ

ಬೆಂಗಳೂರು: ಕರ್ನಾಟಕದ ಪ್ರಭಾವಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೊಮ್ಮಗಳಾದ ಸೌಂದರ್ಯ ಶುಕ್ರವಾರ ಮಧ್ಯಾಹ್ನ 10 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವೆನ್ನಲಾಗಿದೆ. ಸೌಂದರ್ಯ ಮೂರು ದಿನಗಳ ಹಿಂದಷ್ಟೇ ಗಂಡನ ಮನೆಗೆ ಬಂದಿದ್ದು ಗಂಡನೊಂದಿಗೆ ಜಗಳವಾಡಿದ್ದಾರೆ. ಆಗ ಸೌಂದರ್ಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 9 ತಿಂಗಳ ಮಗುವಿದ್ದು, 3 ತಿಂಗಳ ಹಿಂದಷ್ಟೇ ಮಗುವಿನ ನಾಮಕರಣವಾಗಿತ್ತು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.

ಸೌಂದರ್ಯ ಬಿಎಸ್​ವೈ ಪುತ್ರಿ ಪದ್ಮಾವತಿಯವರ ಪುತ್ರಿ. ಇವರು ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರೇಡಿಯಾಲಜಿಸ್ಟ್ ಆಗಿದ್ದ ಸೌಂದರ್ಯ ಅವರಿಗೆ ಖಿನ್ನತೆ ಕಾಡುತ್ತಿತ್ತು. ಮೌಂಟ್ ಕಾರ್ಮೆಲ್ ಬಳಿಯ ಧವಳಗಿರಿ ಅಪಾರ್ಟ್​ಮೆಂಟ್​ನಲ್ಲಿ ಮಗುವನ್ನು ಬೇರೊಂದು ರೂಮಿನಲ್ಲಿ ಮಲಗಿಸಿದ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 8 ಗಂಟೆಗೆ ಕೆಲಸದವರು ಹೋದ ನಂತರ ಸೌಂದರ್ಯ 10 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎನ್ನಲಾಗಿದೆ. ಕೆಲಸದವರು ಬಾಗಿಲು ಬಡಿದು ನಂತರ ಪತಿ ಡಾ.ನಿರಂಜನ್​ರವರಿಗೆ ಕರೆ ಮಾಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ದಾರಿಯಲ್ಲೇ ಸೌಂದರ್ಯ ಪ್ರಾಣ ಹೋಗಿತ್ತು ಎನ್ನಲಾಗಿದೆ.

RELATED ARTICLES

Related Articles

TRENDING ARTICLES