Tuesday, November 5, 2024

ಕಾಂಡ್ಲಾ ಎಂಬ ಸ್ವರ್ಗದ ನಡುವೆ ಕಯಾಕಿಂಗ್​ ಸವಾರಿ

ವನ ಮತ್ತು ವನ್ಯ ಸಂಪತ್ತು, ನಮ್ಮ ನಾಡಿನ ವೈಭವ  ಹೆಚ್ಚಿಸುತ್ತೆ. ಆದ್ರೆ ಈ ಸಂಪತ್ತಿಗೆ ನಿಜವಾದ ಬೆಲೆ ಬರೋದು, ಅದರ ವೀಕ್ಷಣೆ ಮಾಡಿದವರಿಗೆ.. ನೈಜ ಸಂಪತ್ತಿನ ದರ್ಶನಭಾಗ್ಯ ಸಿಕ್ಕವರು, ನಿಜವಾಗಿಯೂ ಅದೃಷ್ಟವಂತರು. ಅಂತಹಾ ಅದೆಷ್ಟೋ ಸಂಪತ್ತು ನಮ್ಮ ನಡುವೆ ಇದ್ದರೂ ಕೂಡ ಅದರ ಮಹತ್ವ ಅರಿಯದೆ ನಾವು ಕುರುಡರಾಗಿಯೇ ಇರೋದು ದುರಾದೃಷ್ಟ.. ಅದರಲ್ಲೂ ಇಡಿ ಏಷ್ಯಾ ಖಂಡದಲ್ಲೇ ಅತೀ ಸಮೃದ್ಧ, ಅತೀ ಡೊಡ್ಡ ಕಾಂಡ್ಲಾವನ ನಮ್ಮ ಕರುನಾಡಿನಲ್ಲಿ ಇದೇ ಅನ್ನೋದು ಅದೆಷ್ಟೋ ಜನರಿಗೇ ಗೊತ್ತೇ ಇರಲಿಲ್ಲ. ಆದರೇ ಇದೀಗ ಅಲ್ಲಿನ ಉತ್ಸಾಹಿ ಯುವಕರ ಸಹಾಯದಿಂದ, ಆ ವನ್ಯ ಸಂಪತ್ತಿನ ದರ್ಶನ ಭಾಗ್ಯ ಲಭಿಸುತ್ತಿದೆ. ಅದೇ ZONE 51

ZONE 51, ಇಡಿಯ ಉಡುಪಿ ಸೌಂದರ್ಯವನ್ನ ಪರಿಚಯಿಸುವ ಪ್ರಯತ್ನ ಮಾಡಿತ್ತಿದ್ದಾರೆ. ಆದರೆ, ಇವೆಲ್ಲದರ ಮದ್ಯೆ ಏಷ್ಯಾದ ಅತೀ ಡೊಡ್ಡ ಕಾಂಡ್ಲಾವನದ ನಡುವೇ ನಡೆಯುವ ಈ ಸವಾರಿ ಜೀವನದ ಅತ್ಯುತ್ತಮಗಳಲ್ಲಿ ಒಂದಾಗೋದು ಖಂಡಿತ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಎನ್ನುವ ಊರಿನ ಮದ್ಯೆ ಇರುವ ಪಾರಂಪಳ್ಳಿಯಲ್ಲಿರುವ ಈ ಕಾಂಡ್ಲಾವನದ ದರ್ಶನದ ರೂಪುರೇಶೇಯ ಹರಿಕಾರ ವಿನಯ ಬಂಗೇರ, ತನ್ನೂರ ಸೌಂದರ್ಯವನ್ನು ಇಮ್ಮಡಿಗೊಳಿಸಿರುವ ಈ ವನ ಸಂಪತ್ತಿನ ದರ್ಶನವನ್ನು ಪ್ರವಾಸಿಗರಿಗೆ ಉನಬಡಿಸಬೇಕು ಅನ್ನೋ ಮಹದಾಸೆ ಹೊತ್ತು, ಕೇವಲ ಎರಡು ದೋಣಿಯಿಂದ ಈ ಉದ್ಯಮ ಆರಂಭಿಸಿದವರು. ಆರಂಭದಲ್ಲಿ ಉದ್ಯಮದ ಆಸೆ ಇಲ್ಲದೇ, ಕೇವಲ ಮೇಲಿನ ಉದ್ದೇಶದಿಂದ ಆರಂಬಿಸಿ, ಇದೀಗ ದೊಡ್ಡ ಉದ್ಯಮವಾಗಿ ಬದಲಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ, ಪ್ರವಾಸಿಗರೂ ಕೂಡಾ, ಈ ಕಾಂಡ್ಲಾವನದ ಸೌಂದರ್ಯ ಸವಿಯಲು ಆಗಮಿಸುತ್ತಿದ್ದಾರೆ.

ದೋಣಿ ಮೂಲಕ ವಿಶಾಲವಾದ ನದಿ, ಅದರ ಮಧ್ಯೆ ಚಿಕ್ಕಚಿಕ್ಕ ನಡುಗಡ್ಡೆಗಳು, ಅಲ್ಲಿ ತುಂಬಿರುವ ಕಾಂಡ್ಲಾವನಗಳು ಪಕ್ಷಿಗಳು ಇವನ್ನೆಲ್ಲ ನೋಡಿಬರುವುದೇ ಪ್ರವಾಸಿಗರಿಗೆ ಮೋಜು. ಅಳಿವೆ ಪ್ರದೇಶಗಳಲ್ಲಿ ಬೇರೆ ಜಾತಿಯ ಗಿಡಗಳು ಬೆಳೆಯಲಾರದ ಜೌಗು ಮಣ್ಣಿನ ಕ್ಲಿಷ್ಟಕರ ಸನ್ನಿವೇಶದಲ್ಲಿ ಬೆಳೆಯುವ ಕಾಂಡ್ಲಾ ಗಿಡಗಳು ಪರಿಸರ ಹಾಗೂ ಆರ್ಥಿಕ ಮಹತ್ವ ಪಡದುಕೊಂಡಿವೆ. ಈ ಕಾಂಡ್ಲಾಗಿಡಗಳು ಸಮುದ್ರ ಮತ್ತು ನದಿ ತೀರದ ಮಣ್ಣಿನ ಸವಕಳಿ ಮತ್ತು ಕೊರೆತ ತಡೆದು ಕರಾವಳಿ ಪ್ರದೇಶಗಳಿಗೆ ನೈಸರ್ಗಿಕ ತಡೆ ಗೋಡೆಗಳಾಗಿ ಕಾರ್ಯನಿರ್ವಹಿಸುತ್ತವೆ. ಸುನಾಮಿ ಮತ್ತು ಚಂಡ ಮಾರುತಗಳ ಪ್ರಭಾವ ತಗ್ಗಿಸುತ್ತವೆ.

ತಂಪಾದ ನೆಲೆ, ಹಲವಾರು ಜಾತಿಯ ಪಕ್ಷಿಗಳು ಮತ್ತು ಪ್ರಾಣಿಗಳ ಆಹಾರದ ಮೂಲ ಮತ್ತು ವಂಶೋತ್ಪಾದನೆಯ ನೆಲೆ. ಅತ್ಯಧಿಕ ಪ್ರಮಾಣದಲ್ಲಿ ಇಂಗಾಲವನ್ನು ಹೀರಿಕೊಂಡು ವಾತಾವರಣವನ್ನು ತಂಪಾಗಿಡುತ್ತವೆ. ಜೇನಿನ ಹುಳುಗಳಿಗೆ ಉತ್ತಮ ಮಕರಂಧ ಒದಗಿಸುತ್ತವೆ. ಇಂಥ ಅಪರೂಪದ ಕಾಂಡ್ಲಾವನ ಪರಿಸರಾಸಕ್ತರಿಗೆ, ವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅವಕಾಶ ಒದಗಿಸಿದೆ. ಕಾಂಡ್ಲಾ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು zone 51 ಎಂಬ ಸೂರಿನ ಅಡಿಯಲ್ಲಿ ಅವಕಾಶ ನೀಡಲಾಗಿದೆ.. ನೀವು 2022ಕ್ಕೆ ಭೇಟಿ ನೀಡಲೇಬೇಕಾದ ಜಾಗಗಳ ಪಟ್ಟಿಗೆ ಇದೂ ಸೇರಿಕೊಳ್ಳಿ..

ಲೊಕೇಷನ್​ : https://goo.gl/maps/5rKSHfFdRJ58NT1Z9

ಪ್ರಣೂತ್​ ಗಾಣಿಗ, ಪವರ್​ ಟಿವಿ

RELATED ARTICLES

Related Articles

TRENDING ARTICLES