Monday, December 23, 2024

3 ವರ್ಷದ ಮಗುವಿನ ಮೇಲೆ 30 ವರ್ಷದ ಕಾಮುಕನಿಂದ ಅತ್ಯಾಚಾರ

ಹುಬ್ಬಳ್ಳಿ: 3 ವರ್ಷದ ಮಗು ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಮಾನವೀಯ ಘಟನೆ ಹುಬ್ಬಳ್ಳಿಯಿಂದ ವರದಿಯಾಗಿದೆ. 30 ವರ್ಷದ ಕಾಮುಕನಿಂದ ಈ ಕೃತ್ಯ ನಡೆದಿದ್ದು, ಇವನು ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿರುವ ಶಂಕೆ.

ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮನೆಯ ಸಮೀಪದಲ್ಲೇ ವಾಸವಾಗಿರುವ ಪರಿಚಯದವರ ಮಗುವಿನ ಮೇಲೆ ಈ ಕಾಮುಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಗುವಿನ ಕಾಲಿಗೆ ಕಚ್ಚಿ ಗಾಯಗೊಳಿಸಿ ಈ ಕಾಮುಕ ವಿಕೃತಿ ಮೆರೆದಿದ್ದಾನೆ. ಈ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕಾಮುಕನನ್ನು ಬಂಧಿಸಿ, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES