ರಿಯೊ ಡಿ ಜನೈರೊ (ಬ್ರೆಜಿಲ್): ಕಳೆದ 24 ಗಂಟೆಗಳಲ್ಲಿ ಬ್ರೆಜಿಲ್ನಲ್ಲಿ 2,28,954 ಕೊರೋನ ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಬ್ರೆಜಿಲ್ ದಾಖಲೆಯನ್ನೇ ಸೃಷ್ಟಿಸಿದೆಯೆಂದು ಹೇಳಬಹುದು. ಈ ಮೂಲಕ ಬ್ರೆಜಿಲ್ನಲ್ಲಿ ಕೊರೋನ ಪೀಡಿತರ ಸಂಖ್ಯೆ 24.7 ಮಿಲಿಯನ್ಗೆ ಏರಿದೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಸಚಿವಾಲಯ ಗುರುವಾರ ತಡರಾತ್ರಿ ತಿಳಿಸಿದೆ.
ಇದೇ ಅವಧಿಯಲ್ಲಿ ಸಾವಿನ ಸಂಖ್ಯೆ 672ರಿಂದ 6,25,000 ಕ್ಕೆ ಏರಿದೆಯೆಂದು ಹೇಳಲಾಗಿದೆ. ಇತರ ಹಲವು ದೇಶಗಳಂತೆಯೇ ಬ್ರೆಜಿಲ್ ಸಹ ಕೊವಿಡ್ನ ರೂಪಾಂತರಿ ಒಮಿಕ್ರಾನ್ ಅಲೆಯನ್ನು ಎದುರಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಮಾರ್ಚ್ 11, 2020ರಂದು ಕೊವಿಡ್ 19ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ನಂತರ ಇಲ್ಲಿಯವರೆಗೆ ವಿಶ್ವದಾದ್ಯಂತ 365.26 ಮಿಲಿಯನ್ ಜನರು ಸೋಂಕಿಗೆ ಒಳಗಾಗಿದ್ದಾರೆ. 5.63 ಮಿಲಿಯನ್ಗಿಂತಲೂ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.