Wednesday, January 22, 2025

ನಾವ್ಯಾರೂ ಬಿಜೆಪಿ ಬಿಟ್ಟು ಹೋಗಲ್ಲ : ಸಚಿವ ಕೆ.ಗೋಪಾಲಯ್ಯ

ಬೆಂಗಳೂರು : ಬಿಜೆಪಿಗೆ ವಲಸೆ ಬಂದ ಸಚಿವರು ಮತ್ತೆ ಬೇರೆ ಪಕ್ಷ ಸೇರುತ್ತಾರೆಂಬ ಚರ್ಚೆಗೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯೆ ನೀಡಿದ್ದು, “ಯಾರು ವದಂತಿ ‌ಹಬ್ಬಿಸುತ್ತಿದ್ದಾರೋ ಅವರನ್ನೇ ಕೇಳಿ” ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮಾತಿನಂತೆ ನಡೆದುಕೊಂಡಿದ್ದಾರೆ, ಸೋತವರಿಗೂ ಎಂಎಲ್​​ಸಿ ಮಾಡಿ ಸ್ಥಾನಮಾನ ಕೊಟ್ಟಿದ್ದಾರೆ ಎಂದಿದ್ದಾರೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಕೊವಿಡ್ ಮಧ್ಯೆಯೂ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ಬೇರೆ ಪಕ್ಷಕ್ಕೆ ಹೋಗುವ ಸಂದರ್ಭ ಬರುವುದಿಲ್ಲ. ನಾವ್ಯಾರು ಬೇರೆ ಪಕ್ಷಕ್ಕೆ ಅರ್ಜಿ ಹಾಕಿಲ್ಲ‌ ಎಂದು ಹೇಳಿದರು.

ಬೊಮ್ಮಾಯಿ ನೇತೃತ್ವದಲ್ಲೇ ಅಧಿಕಾರಕ್ಕೆ ‌ಬರುತ್ತೇವೆ. ನನಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿದೆ. ಸಚಿವ ಸ್ಥಾನ ನೀಡಿದೆ, ಎರಡು ಜಿಲ್ಲೆ ಉಸ್ತುವಾರಿ ಕೊಟ್ಟಿದ್ದಾರೆ. ನಮಗೆ ಇನ್ನೇನು ಕೊಡಬೇಕು. ನಮ್ಮಲ್ಲಿ‌ ಹೋಗುವವರು ಯಾರು ಇಲ್ಲ. ಬೇರೆ ಪಕ್ಷದಿಂದ ಬರುವವರ ಬಗ್ಗೆ ಗೊತ್ತಿಲ್ಲ, ಅದರ ಬಗ್ಗೆ ನೀವು ರಮೇಶಣ್ಣನನ್ನೇ ಕೇಳಬೇಕು ಎಂದು ಸಚಿವ ಗೋಪಾಲಯ್ಯ ಹೇಳಿದರು.

RELATED ARTICLES

Related Articles

TRENDING ARTICLES