ಬೆಂಗಳೂರು : ನಾಳೆ ರಾಜ್ಯದ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರು ಡಬ್ಬಲ್ ಧಮಾಕ ಸಂಭ್ರಮದಲ್ಲಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ನಾಳೆಗೆ ಆರು ತಿಂಗಳು ಪೊರೈಸಿದೆ ಜೊತೆಗೆ ಅವರು ಹುಟ್ಟುಹಬ್ಬ. ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು ನಾಳೆ ಯಾವುದೇ ಸಪ್ರೈಸ್ ಘೋಷಣೆ ಇರುವುದಿಲ್ಲ. ಆರು ತಿಂಗಳಿಗೆಲ್ಲ ಯಾವ ಘೋಷಣೆ ಮಾಡಲಿ ನಮ್ಮ ಸರ್ಕಾರ ಸ್ಪಂದನಶೀಲ ಸರ್ಕಾರವಾಗಿದೆ. ಯಾವಾಗವಾಗ ಸಮಸ್ಯೆ ಬಂದಿದ್ದಾವೋ, ಅದಕ್ಕೆಲ್ಲಾ ನಾವು ಸ್ಪಂದನೆ ಮಾಡ್ಕೊಂಡು ಬಂದಿದ್ದೇವೆ. ಜೋಳ ಖರೀದಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಈಗ ರಾಗಿ ಖರೀದಿ ಮುಂದುವರಿಸುವ ಬಗ್ಗೆ ನಿರ್ಧಾರ ಮಾಡಿದ್ದೇವೆ, ರೈತರಿಗೆ ಅನುಕೂಲ ಮಾಡಿಕೊಡ್ತೀವಿ ಹೀಗೆ ನಿರಂತರವಾಗಿ ಜನರಿಗೆ ಸರ್ಕಾರ ಸಹಾಯ ಮಾಡುತ್ತಾ ಬರುತ್ತಿದೆ ಎಂದು ಹೇಳಿದರು.
ಸಿಎಂ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದು ನಾಳೆಗೆ ಆರು ತಿಂಗಳು ಪೂರೈಕೆ ಮತ್ತು ಹುಟ್ಟುಹಬ್ಬದ ಹಿನ್ನೆಲೆ ರಾಜ್ಯಕ್ಕೆ ಗಿಫ್ಟ್ ವಿಚಾರವಾಗಿ ಪ್ರತಿಕ್ರಿಯಿಸಿ ಮೊದಲಿಗೆ ನಾನು ಹುಟ್ಟುಹಬ್ಬದ ಆಚರಿಸಿಕೊಳ್ಳಲ್ಲ, ಮತ್ತು ಆರು ತಿಂಗಳು ಪೂರೈಸಿದ್ದಕ್ಕೆ ಆಡಳಿತದ ಪಕ್ಷಿನೋಟದ ಪುಸ್ತಕ ಬಿಡುಗಡೆ ಮಾಡ್ತೀವಿ ಅಷ್ಟೆ. ಅದನ್ನ ಬಿಟ್ಟು ಬೇರೆ ಯಾವುದೇ ಹೊಸ ಘೋಷಣೆ ಮಾಡುವುದಿಲ್ಲ.
ಕೋವಿಡ್ ಟಫ್‌ರೂಲ್ಸ್ ಸಡಿಲಿಕೆ ವಿಚಾರಕ್ಕೇ ಕ್ಯಾಬಿನೆಟ್ ಅಜೆಂಡಾ ಮೇಲೆ ಚರ್ಚೆಯಾಗುತ್ತದೆ. ಕೋವಿಡ್ ನಿರ್ವಹಣೆ ಬಗ್ಗೆ ತಜ್ಞರಿಗೆ ವರದಿ ಕೇಳಿದ್ದೇನೆ ಆ ವರದಿ ಬಂದ ನಂತರ ಕೋವಿಡ್ ಟಫ್‌ರೂಲ್ಸ್ ಬಗ್ಗೆ ಚರ್ಚೆ ಮಾಡುತ್ತೇವೆ. ವಿನಾಯಿತಿ ಬಗ್ಗೆ ಕ್ಯಾಬಿನೆಟ್‌ನಲ್ಲಿ ಏನಾದ್ರೂ ಬಂದ್ರೆ ಚರ್ಚೆ ಮಾಡ್ತೀವಿ ಎಂದು ಎಂದು ಸಿ ಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.