Thursday, January 23, 2025

ಸಿದ್ದರಾಮಯ್ಯನವರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ? ಪಕ್ಷಾಂತರವೋ?

ಬೆಂಗಳೂರು: ಸಿದ್ದರಾಮಯ್ಯನವರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ? ಪಕ್ಷಾಂತರವೋ? ಎಂದು ಟ್ವೀಟ್‌ ಮೂಲಕ ಸಿದ್ದರಾಮಯ್ಯಗೆ ರಾಜ್ಯ ಬಿಜೆಪಿ ಕುಟುಕಿದೆ.

ನಮ್ಮ ಸಂಪರ್ಕದಲ್ಲಿ ಆ ಪಕ್ಷದವರು ಇದ್ದಾರೆ, ಈ ಪಕ್ಷದವರು ಇದ್ದಾರೆ ಆದರೆ ಕಳೆದ‌‌‌‌ ಕೆಲ ದಿನಗಳಿಂದ ‌ನಿರಂತರ ಬುರುಡೆ ಬಿಟ್ಟಾಗಲೇ ಅನುಮಾನವಿತ್ತು.ಈಗ ನೋಡಿದರೆ ತಮ್ಮ ಆಪ್ತರನ್ನೇ ಬೇರೆಯವರ ಸಂಪರ್ಕಕ್ಕೆ ಬಿಟ್ಟಿದ್ದಾರೆ. ಸಿದ್ದರಾಮಯ್ಯನವರೇ, ಮತ್ತೊಮ್ಮೆ ವಲಸೆಗೆ ವೇದಿಕೆ ಸೃಷ್ಟಿಸಿಕೊಳ್ಳುತ್ತಿದ್ದೀರಾ? ಸುಳ್ಳು ಹೇಳುವುದರಲ್ಲಿ ಸದಾ ‘ಸಿದ್ದ’ರಾಮಯ್ಯ ಆಗಿರುವವರ ಸುಳ್ಳಿನ ಕೊಡ ತುಂಬಿದೆ.2023 ರಲ್ಲಿ ಸ್ಪಷ್ಟ ಉತ್ತರ ಸಿಗಲಿದೆ, ಸಿದ್ದರಾಮಯ್ಯನವರೇ, ಪಲಾಯನಕ್ಕೆ ಸಿದ್ಧವಾಗಿರಿ ಎಂದು ಟ್ವೀಟ್‌ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES