ಕಲಬುರಗಿ: ಕಲಬುರಗಿಯಲ್ಲಿ ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರೀಯಾಂಕ್ ಖರ್ಗೆ ಸುದ್ದಿಗೋಷ್ಟಿ ನಡೆಸಿ ಬಿಜೆಪಿ ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಕ್ಯಾಬಿನೆಟ್ ಸಬ್ ಕಮಿಟಿಯ ಅನುಮತಿ ಪಡೆಯದೇ ಸರ್ಕಾರದಿಂದ ಸುತ್ತೋಲೆ ಹೇಗೆ ಬರ್ತಿವೆ? ಎಂದು ಕೇಳಿದ ಪ್ರಿಯಾಂಕ್ ಬಿ ಶ್ರೀರಾಮುಲು ಅವರಿಗೆ 371(ಜೆ) ಬಗ್ಗೆ ಗಂಧ-ಗಾಳಿ ಗೋತ್ತಿಲ್ಲ. ಬಿಜೆಪಿ ಎಮ್‌ಎಲ್‌ಎಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳಿದ ಖರ್ಗೆ ಪಿಎಸ್‌ಐ ನೇಮಕಾತಿ ಪಟ್ಟಿಯನ್ನ ರದ್ದುಪಡಿಸಲು ಸರ್ಕಾರಕ್ಕೆ ಆಗ್ರಹಿಸಿದರು.
ಪಿಎಸ್‌ಐ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂದ ಪ್ರಿಯಾಂಕ್ ನಲವತ್ತು ಪರ್ಸೆಂಟ್ ಸರ್ಕಾರದಿಂದ ಪಿಎಸ್‌ಐ ನೇಮಕಾತಿಯಲ್ಲೂ ಅಕ್ರಮ ನಡೆಸಿದೆ ಎಂದು ನೇರವಾಗಿ ಆರೋಪಿಸಿದರು. ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ನಡಿತಿದೆ ಅಂತಾ ಖುದ್ದು ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ ಎಂದು ಸರ್ಕಾರವನ್ನು ಕುಟುಕಿದರು.