Sunday, December 22, 2024

ಅಮಾನತು ಮಾಡಲ್ಲ, ಇನ್ನೊಂದು ಮಾಡ್ತೀನಿ : ಸಚಿವ ವಿ.ಸೋಮಣ್ಣ

ಚಾಮರಾಜ‌ಗರ : ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಇಂದು ಅಧಿಕಾರಿಗಳೊಟ್ಟಿಗೆ ಚಾಮರಾಜನಗರದ ಜಿಪಂ ಸಭಾಂಗಣದಲ್ಲಿ ಮೊದಲ ಸಭೆ ನಡೆಸಿದ ಸಚಿವ ವಿ.ಸೋಮಣ್ಣ ಡಿಸಿ ಎಸ್ಪಿ ಸೇರಿದಂತೆ ಎಲ್ಲಾ ಇಲಾಖೆಯ ಮುಖ್ಯಾಧಿಕಾರಿಗಳು, ನಗರಸಭೆ ಆಯುಕ್ತರಿಗೆ ಬೆಂಡೆತ್ತಿ ಚಾಟಿ ಬೀಸಿದ್ದಾರೆ.

ಎಲ್ಲರೂ ತಮ್ಮ-ತಮ್ಮನ್ನು ಮೊದಲು ಪರಿಚಯಿಸಿಕೊಳ್ಳಿ ಎಂದು ಸಚಿವ ಸೋಮಣ್ಣ ಸೂಚಿಸುತ್ತಿದ್ದಂತೆ ಅಧಿಕಾರಿಗಳು ಎದ್ದು ನಿಂತು ತಮ್ಮ ಹೆಸರು, ಇಲಾಖೆ ಹೇಳುತ್ತಿದ್ದಂತೆ ” ನೀನಿನ್ನು ಚುರುಕಾಗಬೇಕು, ನಿನ್ನ ಕೆಲ್ಸ ಸಾಲಲ್ಲ, ಇನ್ನೂ ಇಂಪ್ರೂವ್ ಆಗಬೇಕು ಎಂದು ಮೇಷ್ಟರ ರೀತಿ ಪಾಠ ಮಾಡಿದ್ದಾರೆ.

ಅಧಿಕಾರಿಗಳು ಪರಿಚಯಿಸಿಕೊಳ್ಳುವ ವೇಳೆ ಎಲ್ಲಿ ವಾಸ್ತವ್ಯ ಮಾಡುತ್ತೀದ್ದೀರಾ ಎಂಬ ಪ್ರಶ್ನೆ ತೂರುತ್ತಿದ್ದ ಸಚಿವರು, ಮೈಸೂರಿನಲ್ಲಿ ಉಳಿದುಕೊಂಡಿದ್ದೇನೆ, ಇಲ್ಲೂ ಮನೆ ಮಾಡಿದ್ದೇನೆ ಎಂದು ಕೆಲ ಅಧಿಕಾರಿಗಳು ಉತ್ತರಿಸುತ್ತಿದ್ದಂತೆ ಗರಂ ಆಗುತ್ತಿದ್ದ ಮಿನಿಸ್ಟರ್, ನೀವು ಕೆಲ್ಸ ಮಾಡುವುದು ಇಲ್ಲಿ- ಉಳಿಯುವುದು ಮಾತ್ರ ಅಲ್ಲಾ, ಇದ್ರೆ ಇಲ್ಲಿರಿ , ಇಲ್ಲಾಂದ್ರೆ ಬೇರೆ ಜಿಲ್ಲೆಗೇ ಹೋಗಿ, ಬಲವಂತ ಮಾಡಲ್ಲ, ನಿಮ್ಮಗೇನಾದರೂ ಸಮಸ್ಯೆ ಇದ್ದರೆ ಪರಿಹರಿಸಲಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಯಲ್ಲೇ ಉಳಿಯಬೇಕು, ಮುಂದಿನ ತಿಂಗಳು 4 ರ ಒಳಗೇ ಇಲ್ಲಿ ಮನೆ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.

ಮಹಿಳಾ ಅಧಿಕಾರಿಗಳಿಗೂ ಬೆವರಿಳಿಸಿದ ಸೋಮಣ್ಣ:

ಮಗನಿಗೆ ಆರೋಗ್ಯ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇರುವುದಾಗಿ ಹೇಳಿದ ಕೃಷಿ ಜೆಡಿ ಚಂದ್ರಕಲಾ ಅವರನ್ನೂ ತರಾಟೆಗೆ ತೆಗೆದುಕೊಂಡ ಸಚಿವರು, “ನೋಡಮ್ಮ, ಬೇಕಾದ್ರೆ ನನ್ನ ಮೈಸೂರಿನ ಮನೆಯನ್ನೇ ಬೇಕಾದರೆ ತಗೊ, ಮಗನ ಆರೋಗ್ಯ ಸಮಸ್ಯೆ ಬಗ್ಗೆ ಪರಿಹಾರ ಮಾಡುತ್ತೇನೆ, ಆದ್ರೆ ವಾರದಲ್ಲಿ ನಾಲ್ಕು ದಿನವಾದರೂ ಜಿಲ್ಲಾ ಕೇಂದ್ರದಲ್ಲೇ ಇರಬೇಕಮ್ಮ” ಎಂದು ಸೂಚಿಸಿದರು. ಇನ್ನು, ಡಿಡಿಎಲ್ ಆರ್ ಮಾತನಾಡಿ, ತನ್ನ ಪತಿ ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲೇ ವಾಸ್ತವ್ಯ ಮಾಡುತ್ತಿರುವುದಾಗಿ ಹೇಳಿದ್ದಕ್ಕೆ ಗರಂ ಆದ ಸೋಮಣ್ಣ, “ನೋಡಮ್ಮ, ನಿಮ್ಮದು ಜವಾಬ್ದಾರಿ ಹುದ್ದೆ, ನೀ ಇಲ್ಲೇ ಉಳಿದುಕೊಂಡರೇ, ನಿಮ್ಮ ಯಜಮಾನ್ರೆ ನಿನ್ನನ್ನು ಹುಡುಕುಕೊಂಡು ಇಲ್ಲಿಗೆ ಬರುತ್ತಾರೆ, ನೀ ಇಲ್ಲೇ ಇರಮ್ಮ, ನಿಮ್ಮ ಯಜಮಾನರ ನಂಬರ್​​ ಕೊಡು ನಾನು ಮಾತನಾಡಿ ಹೇಳುತ್ತೇನೆ, ನಿಮ್ಮ ಮಕ್ಕಳನ್ನು ಬೇಕಾದರೆ ನನಗೆ ದತ್ತು ಕೊಡಮ್ಮ, ಮನೆಯಲ್ಲಿ ನಾನು ನನ್ನ ಹೆಂಡತಿ ಇಬ್ರೇ ಇರೋದು ಚೆನ್ನಾಗಿ ಸಾಕ್ತೀವಿ, ನೀ ಇಲ್ಲೇ ಇರಬೇಕು ಎಂದು ಸೂಚಿಸಿದರು.

ಒಟ್ಟಿನಲ್ಲಿ ಇಂದಿನ ಸಭೆಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳನ್ನು ಬೆಂಡೆತ್ತಿದ್ದ ಸಚಿವರು, ಅಸಡ್ಡೆ ಬಿಟ್ಟು ಕೆಲಸ ಮಾಡಿ, ಎಡವಟ್ಟು ಮಾಡುವುದೇನಾದರೂ ಗೊತ್ತಾದರೇ ಅಮಾನತು ಮಾಡಲ್ಲ, ಇನ್ನೊಂದು ಮಾಡ್ತೀನಿ, ಮುಖ ನೋಡಿದ ಕೂಡಲೇ ಹೇಳಿ ಬಿಡ್ತೀನಿ ನಿಮ್ಮ ಕೆಲ್ಸ ಹೇಗೆ ಎಂದು ಚುರುಕಾಗಿ ಕೆಲಸ ಮಾಡಿ, ಬಡವರ ಅಭಿವೃದ್ಧಿ ಮಾಡಿ ಎಂದು ಖಡಕ್ ವಾರ್ನಿಂಗ್ ಕೊಟ್ಟರು.

ಡಿಸಿ ಚಾರುಲತಾ ಸೋಮಲ್, ಜಿಪಂ ಸಿಇಒ ಗಾಯತ್ರಿ ಹಾಗೂ ಎಸ್ಪಿ ದಿವ್ಯಾ ಸಾರಾ ಥಾಮಸ್ ಅನುಪಸ್ಥಿತಿಯಲ್ಲೂ ಮೂವರು ಮಹಿಳಾ ಅಧಿಕಾರಿಗಳಿಗೆ ಚಾಟಿ ಬೀಸಿದ ಸಚಿವರು, ಜನಸಾಮಾನ್ಯರು ಕರೆ ಮಾಡಿದರೇ ಸ್ವೀಕರಿಸಿ ಮಾತನಾಡುವುದನ್ನು ನೀವು ಕಲಿಯಬೇಕು, ಒಬ್ಬರ ಕರೆಯನ್ನೂ ನೀವು ಸ್ವೀಕರಿಸುತ್ತಿಲ್ಲ ಎಂಬ ದೂರಿದ್ದು ಈ ವರ್ತನೆ ಸರಿಯಿಲ್ಲ, ಜನಸಾಮಾನ್ಯರಿಗೆ ಸ್ಪಂದಿಸಿ ಎಂದು ಅಧಿಕಾರಿಗಳ ನಡೆಗೆ ಕಿಡಿಕಾರಿದರು.

ಜಿಪಂ ಸಿಇಒ ಅವರು ಓಡಾಡಬೇಕು, ಗ್ರಾಮಾಂತರ ಭಾಗದಲ್ಲಿ ಕೆಲಸ ಮಾಡುವುದು ಬಹಳಷ್ಟಿದ್ದು ಕಚೇರಿಯಲ್ಲೇ ಕುಳಿತರೇ ಆಗಲ್ಲ, ಎಲ್ಲಾ ಅಧಿಕಾರಿಳಿಗೂ ಚುರುಕು ಮುಟ್ಟಿಸಿ ಎಂದು ಸೂಚಿಸಿದರು. ಶಾಸಕರಾದ ಸಿ‌.ಪುಟ್ಟರಂಗಶೆಟ್ಟಿ ಹಾಗೂ ಎನ್.ಮಹೇಶ್, ಎಂಎಲ್ಸಿ ಮಂಜೇಗೌಡ

RELATED ARTICLES

Related Articles

TRENDING ARTICLES