Monday, December 23, 2024

ಮೆಗಾಸ್ಟಾರ್​ ಚಿರಂಜೀವಿಗೂ ಬಿಡಲಿಲ್ಲ ಕೊರೋನಾ!

ಹೈದರಾಬಾದ್: ದಕ್ಷಿಣದ ಮೆಗಾಸ್ಟಾರ್ ಚಿರಂಜೀವಿ ಯಾರಿಗೆ ಗೊತ್ತಿಲ್ಲ ಹೇಳಿ? ತೆರೆಯ ಮೇಲೆ ದುಷ್ಟರ ಹುಟ್ಟಡಗಿಸುವ ಇಂಥ ಚಿರಂಜೀವಿಯನ್ನು ಇದೀಗ ಕೊರೋನ ಮೂರನೆ ಅಲೆ ಕಟ್ಟಿಹಾಕಿದೆ. ಈ ವಿಷಯವನ್ನು ಮೆಗಾಸ್ಟಾರ್ ಬುಧುವಾರ ತಮ್ಮ ಟ್ವಿಟರ್ ಹ್ಯಾಂಡಲ್​ನಲ್ಲಿ ಖಚಿತಪಡಿಸಿದ್ದಾರೆ.

“ಆತ್ಮೀಯರೇ, ಎಲ್ಲಾ ಮುನ್ನೆಚ್ಚರಿಕೆಗಳ ಹೊರತಾಗಿಯೂ , ನಾನು ನಿನ್ನೆ ರಾತ್ರಿ ಸೌಮ್ಯ ರೋಗಲಕ್ಷಣಗಳೊಂದಿಗೆ ಕೋವಿಡ್ 19 ಪಾಸಿಟಿವ್​ಗೆ ಒಳಗಾಗಿದ್ದೇನೆ. ಆದ್ದರಿಂದ ಮನೆಯಲ್ಲೇ ಕ್ವಾರಂಟೈನ್ ಮಾಡುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರಿಗೂ ಪರೀಕ್ಷೆಗೆ ಒಳಗಾಗಲು ನಾನು ವಿನಂತಿಸುತ್ತೇನೆ.” ಎಂದು ಟ್ವಿಟ್ ಮಾಡಿದ್ದಾರೆ ಚಿರಂಜೀವಿ. ತಮ್ಮ ನೆಚ್ಚಿನ ಸ್ಟಾರ್​ಗೆ ಕೊರೋನ ಎಂಬುದು ತಿಳಿದ ತಕ್ಷಣ ಅವರ ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳಿಂದ ಶೀಘ್ರವಾಗಿ ಗುಣಮುಖರಾಗಿ ಎಂಬ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

RELATED ARTICLES

Related Articles

TRENDING ARTICLES