Monday, December 23, 2024

ಕಾಂಗ್ರೆಸ್ ಬಿಟ್ಟವರನ್ನ ಸೇರಿಸಿಕೊಳ್ಳಲ್ಲ : ಸಿದ್ದರಾಮಯ್ಯ

ಬೆಂಗಳೂರು : ಹತ್ತು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧೆ ಮಾಡಿ ಎಂದು ಹೇಳುತ್ತಿರುವುದರ ಬಗ್ಗೆ ಮಾತನಾಡಿದ ಮಾಜಿ ಸಿ ಎಂ ಸಿದ್ದರಾಮಯ್ಯ.

ನನಗೆ ಹತ್ತು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧೆ ಮಾಡಿ ಎಂದು ಹೇಳ್ತಿರುವುದು ನಿಜ. ಕೊಪ್ಪಳ, ಕೋಲಾರ, ಹೆಬ್ಬಾಳ, ವರುಣ,ಚಾಮರಾಜಪೇಟೆ, ಬಾದಾಮಿಯಲ್ಲಿ ನಿಲ್ಲುವಂತೆ ಮತದಾರರು ಒತ್ತಡ ಹಾಕುತ್ತಿದ್ದಾರೆ. ಆದರೆ, ಹೈಕಮಾಂಡ್ ಎಲ್ಲಿ ಸ್ಪರ್ಧೆ ಮಾಡು ಎಂದು ಹೇಳುತ್ತಾರೊ ಅಲ್ಲಿ ಸ್ಪರ್ಧೆಗೆ ನಿಲ್ಲುತ್ತೇನೆ. ಅಲ್ಲದೇ ಚಾಮುಂಡೇಶ್ವರಿ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ. ನಾನೇ ಅಲ್ಲಿ ಸ್ಪರ್ಧೆ ಮಾಡಬಾರದು ಎಂದು ಕೊಂಡಿದ್ದೇನೆ ಹಾಗಾಗಿ ಅಲ್ಲಿ ಮಾಡುವುದಿಲ್ಲ.

ಇನ್ನೂ ಚುನಾವಣೆಗೆ ಒಂದು ವರ್ಷ ಎರಡು ತಿಂಗಳು ಬಾಕಿಯಿದೆ ಅಷ್ಟರಲ್ಲಿ ಎಲ್ಲಿ ನಿಲ್ಲಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅಲ್ಲದೇ ವರುಣಾದಲ್ಲಿ ೫೫ ಸಾವಿರ ಅಂತರದಲ್ಲಿ ಯತೀಂದ್ರ ಗೆದ್ದಿದ್ದಾರೆ. I make it very very clear ಎಲ್ಲಿ ಸ್ಪರ್ಧೆ ಮಾಡಬೇಕು ಅಂತ ಇನ್ನು ನಿರ್ಧಾರ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ

ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆಂಬ ವಿಚಾರದಲ್ಲಿ ಪ್ರತಿಕ್ರಿಯಿಸಿ ನಾನು ಬಿಟ್ಟು ಹೋದವರನ್ನ ಸೇರಿಸಿಕೊಳ್ತೇವೆಂದು ಎಲ್ಲಿ ಹೇಳಿದ್ದೇವೆ. ಕಾಂಗ್ರೆಸ್ ಪಕ್ಷ ಬಿಟ್ಟು ಹೋದವರನ್ನ ನಾವು ಎಂದಿಗೂ ಮತ್ತೆ  ಸೇರಿಸಿಕೊಳ್ಳುವ ಮಾತೇ ಇಲ್ಲ. ಈಗಲೂ ನನ್ನ ಮಾತಿನ ಮೇಲೆ ನಿಂತಿದ್ದೇನೆ ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಬಂದವರಿಗೆ ಸ್ವಾಗತ ಇದನ್ನೇ ನಾನು ಅಸೆಂಬ್ಲಿಯಲ್ಲಿಯೂ ಹೇಳಿದ್ದೇನೆ. ನಾನು ನಾನಾಗಿ ಯಾರ ಜೊತೆಯೂ ಮಾತನಾಡಲ್ಲ ಅವರಾಗಿ ಬಂದರೆ ಮಾತ್ರ ಮಾತನಾಡ್ತೇನೆಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES