Monday, December 23, 2024

ಯಾವುದೂ ಗುಪ್ತ ಸಭೆಗಳಲ್ಲ-ಯತ್ನಾಳ್

ವಿಜಯಪುರ: ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​​​ ಹೇಳಿಕೆ ನೀಡಿದ್ದಾರೆ. ನನ್ನ ಲೆಕ್ಕಾಚಾರದ ಪ್ರಕಾರ ಶೀಘ್ರದಲ್ಲಿ ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆಗಳು ಆಗಬಹುದು. ಉಳಿದಿರುವ ನಾಲ್ಕು ಸ್ಥಾನಗಳು ಭರ್ತಿ ಆಗಬಹುದು ಎಂಬ ನಿರೀಕ್ಷೆ ಇದೆ. ಈ ಸಲ ಯಾವುದೇ ಪರಿಸ್ಥಿತಿಯಲ್ಲಿ ವಿಜಯಪುರ ಜಿಲ್ಲೆಗೆ ಅನ್ಯಾಯ ಆಗುವುದಿಲ್ಲ ಎಂದಿದ್ದಾರೆ.

ಗುಪ್ತ ಸಭೆಗಳ ವಿಚಾರ ಕುರಿತು ಮಾತನಾಡಿದ ಅವರು, ಯಾವುದೂ ಗುಪ್ತ ಸಭೆಗಳಲ್ಲ, ಎಲ್ಲವೂ ಪಕ್ಷದ ಬೆಳವಣಿಗೆಗೆ ಮಾಡಿರುವ ಸಭೆಗಳಷ್ಟೆ. 2023 ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಬೇಕಿದೆ. ಸುಮಾರು 139 ಸೀಟ್ ಗೆಲ್ಲುವಷ್ಟು ಹಾಗೂ ಈಗಿರುವ 25 ಲೋಕಸಭಾ ಸ್ಥಾನಗಳನ್ನ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಸಭೆಗಳು ಆಗುತ್ತಿವೆ. ಇದರಲ್ಲಿ ಯಾವುದೂ ಪಕ್ಷ ವಿರೋಧಿ, ಹಿನ್ನಡೆ, ಪಕ್ಷಕ್ಕೆ ದ್ರೋಹ ಮಾಡುವಂತಹದ್ದು ಇಲ್ಲ ಎಂದಿದ್ದಾರೆ.

RELATED ARTICLES

Related Articles

TRENDING ARTICLES