Wednesday, January 22, 2025

ವಿಧಾನಸಭಾ ಚುನಾವಣೆ ಉಲ್ಟಾ ಹೊಡೆದ ಪ್ರಿಯಾಂಕ ಗಾಂಧಿ

ಉತ್ತರಪ್ರದೇಶ : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ವಿಚಾರವಾಗಿ ಸ್ಫೋಟಕ ಹೇಳಿಕೆ ನೀಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ತಾವು ಶುಕ್ರವಾರ ನೀಡಿದ ಹೇಳಿಕೆಯು ಉತ್ಪ್ರೇಕ್ಷೆಯ ಹೇಳಿಕೆ ಆಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರು ಉತ್ತರ ಪ್ರದೇಶ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಬಗ್ಗೆ ಕೇಳಿದ್ದಾಗ ‘ನಾನೇ ಸಿಎಂ ಅಭ್ಯರ್ಥಿ’ ಎಂಬ ಅರ್ಥ ಬರುವಂತೆ ಪ್ರಿಯಾಂಕಾ ಗಾಂಧಿ ಹೇಳಿಕೆ ನೀಡಿದ್ದರು. ಅದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು.ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ನೀವು ಬೇರೆ ಯಾವುದಾದರೂ ಮುಖವನ್ನು ಕಾಣುತ್ತೀರಾ?’ ಎಂದು ಪ್ರಶ್ನೆ ಮಾಡಿದ್ದರು. ಆ ಬಗ್ಗೆ ಮತ್ತಷ್ಟು ಪ್ರಶ್ನಿಸಿದಾಗ ‘ನೀವು ನನ್ನ ಮುಖವನ್ನು ನೋಡಬಹುದು? ಕಾಣುವುದಿಲ್ಲವೇ?’ ಎಂದು ಕೇಳಿದ್ದರು. ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದ ಪ್ರಿಯಾಂಕಾ ಗಾಂಧಿ ಮತ್ತೆ ಸುದ್ದಿ ಮಾಡಿದ್ದರು.

 

RELATED ARTICLES

Related Articles

TRENDING ARTICLES