Thursday, January 23, 2025

ಮಂಗಳೂರಿನ ಸರ್ಪಕನ್ಯೆ!

ಸಾಮಾನ್ಯವಾಗಿ ಜಿರಳೆ ಕಂಡ್ರೆ ಹುಡುಗಿಯರು ‌ಮಾರು ಉದ್ದ ಓಡಿ ಹೋಗ್ತಾರೆ. ಆದರೆ,ಇಲ್ಲಿಯೊಬ್ಬ ಹುಡುಗಿಗೆ ಮಾರು ಉದ್ದದ ವಿಷಪೂರಿತ ಹಾವುಗಳನ್ನು ಕಂಡ್ರೆ ಬಲು ಪ್ರೀತಿ. ಸರ್ಪಗಳ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಆ ಅಪ್ಸರೆ, ವಿಷಪೂರಿತ ಸರ್ಪಗಳನ್ನು ರಕ್ಷಿಸುವುದನ್ನೇ ಕಾಯಕ‌ ಮಾಡಿಕೊಂಡಿದ್ದಾಳೆ.

ವಿಷಪೂರಿತ ಹಾವುಗಳ ಜೊತೆ ಶರಣ್ಯ ಭಟ್‌ ಸ್ನೇಹ!; ಬಿ.ಎಸ್ಸಿ ವಿದ್ಯಾರ್ಥಿನಿಯ ಉರಗ ಪ್ರೀತಿಗೆ ಜನರು ಫಿದಾ!

ಹೌದು, ಹಾವು ಅಂದ್ರೆ ಯಾರಿಗೆ ತಾನೇ ಭಯವಿರಲ್ಲ ಹೇಳಿ? ಆದರೆ,ಈ ಚಂದದ ಚೆಲುವೆಗೆ ಹಾವುಗಳನ್ನು ಕಂಡ್ರೆ ಬಲು ಪ್ರೀತಿ. ಈಕೆಯ ಹೆಸರು ಶರಣ್ಯ ಭಟ್.ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಅಂತಿಮ ವರ್ಷದ ಬಿ.ಎಸ್ಸಿವ್ಯಾಸಂಗ ಮಾಡುತ್ತಿದ್ದಾರೆ. ಯಾವ ಭಯವೂ ಇಲ್ಲದೆ ನೂರಕ್ಕೂ ಹೆಚ್ಚು ಹಾವುಗಳನ್ನ ರಕ್ಷಣೆ ಮಾಡಿದ ಹೆಗ್ಗಳಿಕೆ ಈಕೆಯದ್ದು. ವಿಷಸರ್ಪಗಳ ಬಗ್ಗೆ ಮಾಹಿತಿ ಸಿಕ್ಕರೆ ಸಾಕು..ತಕ್ಷಣವೇ ಶರಣ್ಯ ಅಲ್ಲಿರ್ತಾಳೆ. ಆ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುತ್ತಾಳೆ. ಕನ್ನಡಿ ಹಾವು, ಹೆಬ್ಬಾವು, ಕೆಟ್ಟ ಹಾವು, ಕೇರೆ ಹಾವು, ನೀರೊಳ್ಳೆ, ನಾಗರಹಾವು ಸೇರಿದಂತೆ ವಿವಿಧ ಪ್ರಭೇದಗಳ ಹಾವುಗಳನ್ನು ರಕ್ಷಿಸಿದ್ದಾಳೆ.

ಸುಮಾರು 2 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿರುವ ಶರಣ್ಯಾಳಿಗೆ, ವಿಷದ ಹಾವು ಹಿಡಿಯುವ ಬಗ್ಗೆ ಉಜಿರೆಯ ಸ್ನೇಕ್ ಜಾಯ್ ತರಬೇತಿ ನೀಡಿದ್ದಾರೆ. ಸ್ಥಳೀಯ ಅಶೋಕ ನಗರದ ಉರಗ ತಜ್ಞ ಅತುಲ್ ಪೈ ಈಕೆಗೆ ಸಾಥ್ ನೀಡುತ್ತಾರೆ. ಸುತ್ತಮುತ್ತಲಿನ ನಿವಾಸಿಗಳ ಮನೆಯಲ್ಲಿ ಹಾವು ಬಂದರೆ ಸಾಕು.. ಈಕೆಗೆ ಕರೆ ಮಾಡಿ ತಿಳಿಸುತ್ತಾರೆ. ಪ್ರಾಣಿಗಳ ಮೇಲಿನ ಪ್ರೀತಿಯೇ ಈಕೆಗೆ ಉರಗಪ್ರೇಮ ತರಿಸಿದ್ಯಂತೆ. ಅಲ್ಲದೆ, ಭರತನಾಟ್ಯದಲ್ಲೂ ಪ್ರಾವೀಣ್ಯತೆ ಹೊಂದಿದ್ದಾಳೆ.

ಒಟ್ಟಿನಲ್ಲಿ ಈ ವಿದ್ಯಾರ್ಥಿನಿಯ ಸಾಹಸಕ್ಕೆ ಎಲ್ಲಾ ಕಡೆಯಿಂದಲೂ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿದ್ಯಾರ್ಥಿನಿಗೆ ಯಾವುದೇ ಆಪತ್ತು ಎದುರಾಗದೇ ಇರಲಿ ಎನ್ನುವುದೇ ನಮ್ಮ ಆಶಯ..

ನಾಗರಾಜ್ ಪವರ್ ಟಿವಿ ಮಂಗಳೂರು

RELATED ARTICLES

Related Articles

TRENDING ARTICLES