Wednesday, December 25, 2024

ಕೇಂದ್ರ ಸುಳ್ಳು ಹೇಳ್ತಿದೆ-ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಚೀನಾ- ಭಾರತ ಗಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಹೇಳುತ್ತಿರುವುದು ಸುಳ್ಳು. ಚೀನಿ ಸೇನೆ ಗಡಿ ಅತಿಕ್ರಮ ನಡೆಸಿಲ್ಲ ಎಂಬುದು ನಂಬಲರ್ಹವಾಗಿಲ್ಲ ಎಂದು ಬಿಜೆಪಿ ಹಿರಿಯ ಧುರೀಣ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಚೀನಿಗಳು ನಮ್ಮ ದೇಶದ ಗಡಿ ದಾಟಿ ಅತಿಕ್ರಮಣ ಮಾಡಿಲ್ಲ ಎಂಬುದು ನಂಬಲಾಗಲ್ಲ. ಒಂದು ವೇಳೆ ಇದು ನಿಜವಾದಲ್ಲಿ, ಈ ಬಗ್ಗೆ ನಮ್ಮ ಸೈನಿಕರೇ ನಮಗೆ ಸುಳ್ಳು ಹೇಳುತ್ತಿದ್ದಾರೆ ಎಂದರ್ಥ ಎಂದು ಹೇಳಿದ್ದಾರೆ. ಸಂಸತ್​ ಅಧಿವೇಶನದಲ್ಲೂ ನಾನು ಈ ಬಗ್ಗೆ ಪ್ರಶ್ನಿಸಿದ್ದೆ. ಆದರೆ, ಅದು ರಾಷ್ಟ್ರೀಯ ಭದ್ರತೆಯ ಕಾರಣ ಮಾಹಿತಿ ನೀಡಲಾಗಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಕೇಂದ್ರದ ಈ ನಡೆಯನ್ನು ನಂಬಲಾಗಲ್ಲ. ಅಲ್ಲದೇ, ಸಚಿವ ರಾಜನಾಥ್​ ಅವರು ಈ ವಿಚಾರದಲ್ಲಿ ನಿಖರ ಮಾಹಿತಿ ಹೊಂದಿಲ್ಲ ಎಂದು ಆರೋಪಿಸಿದ್ದಾರೆ.

RELATED ARTICLES

Related Articles

TRENDING ARTICLES