Wednesday, January 22, 2025

ಕನ್ನಡತಿಯ ರಂಜನಿ ರಾಘವನ್​​ಗೆ ಕೋವಿಡ್​ ಪಾಸಿಟಿವ್​

ಕನ್ನಡತಿ ಧಾರವಾಹಿ ಭುವಿ ಎಂಬ ಪಾತ್ರದ ಮೂಲಕ ಎಲ್ಲರ ಮನೆಮಾತಗಿರುವ ನಟಿ ರಂಜನಿ ರಾಘವನ್ ನನಗೆ ಕೋವಿಡ್​ ಪಾಸಿಟಿವ್​ ದೃಢವಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ಹಾಗೂ ನಾನು ನಿಮ್ಮ ಸಂದೇಶಗಳನ್ನು ನೋಡುತ್ತಿದ್ದೇನೆ. ನಿಮ್ಮ ಪ್ರೀತಿಗೆ ಧನ್ಯವಾದಗಳು. ನನಗೆ ಕೊರೊನಾ ಪಾಸಿಟಿವ್​ ಆಗಿದೆ. ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಚಿಂತಿಸುವ ಅಗತ್ಯವಿಲ್ಲ ಎಂದು ರಂಜನಿ ಅವರು ಬರೆದುಕೊಂಡಿದ್ದಾರೆ. ರಂಜನಿ ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಕೋರುತ್ತಿದ್ದಾರೆ.

ಅಲ್ಲದೇ ಇತ್ತ ಸೀರಿಯಲ್‌ ಟೀಮ್‌ಗೆ ಸಂಕಷ್ಟ ಎದುರಾಗಿದೆ. ಭುವಿಯ ಭಾಗ ಇರುವ ಸೀನ್‌ಗಳನ್ನು ಅವರು ಅವಾಯ್ಡ್ ಮಾಡಬೇಕಿದೆ. ಸಡನ್ನಾಗಿ ಬಂದಿರುವ ಈ ಸಂಕಷ್ಟವನ್ನು ಎದುರಿಸಲು ಟೀಮ್‌ ಸಿದ್ಧತೆಯಲ್ಲಿದೆ. ಬ್ಯಾಂಕಿಂಗ್‌ ಎಪಿಸೋಡ್‌ಗಳಿದ್ದರೆ ಪರವಾಗಿಲ್ಲ. ಆದರೆ ಬ್ಯಾಂಕಿಂಗ್‌ ಇಲ್ಲ ಅಂದರೆ ಸ್ವಲ್ಪ ದಿನ ಭುವಿಯ ಅನುಪಸ್ಥಿತಿಯಲ್ಲಿ ಇತರ ಪಾತ್ರಧಾರಿಗಳು ಕತೆಯನ್ನು ಮ್ಯಾನೇಜ್‌ ಮಾಡೋದು ಅನಿವಾರ್ಯ. ಇದಕ್ಕೋಸ್ಕರ ಕಥೆಯಲ್ಲೊಂದು ಸ್ಟ್ರಾಂಗ್ ರೀಸನ್‌ ಅನ್ನೂ ಸೀರಿಯಲ್‌ ಟೀಮ್‌ ಹುಡುಕಿ ಕೊಳ್ಳಬೇಕಿದೆ.

RELATED ARTICLES

Related Articles

TRENDING ARTICLES