Monday, December 23, 2024

ಗೋಶಾಲೆ ಹೆಸರಿನಲ್ಲಿ ಖಾಸಗಿ ಜಾಗ ವಶಕ್ಕೆ ಮುಂದಾದ ಪಾಲಿಕೆ – ಪ್ರತಿಭಟನೆ

ಶಿವಮೊಗ್ಗ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಆದೇಶ ನೀಡಿ ಯಡವಟ್ಟು ಮಾಡಿಕೊಂಡಿದೆ. ಏಕೆಂದರೆ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಗೋ ಶಾಲೆ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿರುವ ಘಟನೆ ನಗರದ ಹೊರ ವಲಯದ ರಾಗಿಗುಡ್ಡದಲ್ಲಿ ನಡೆದಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಆದೇಶ ನೀಡಿದೆ. ಆದರೆ, ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ನಗರ ಪ್ರದೇಶದಿಂದ 5 ಕಿ. ಮೀ ದೂರದಲ್ಲಿರಬೇಕು. ಜನ ವಸತಿ ಪ್ರದೇಶದಲ್ಲಿ ಇರಬಾರದು ಎಂಬ ನಿಯಮವನ್ನು ಉಲ್ಲಂಘಿಸಿ ಗೋ‌ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಗೋ‌ಶಾಲೆ ನಿರ್ಮಾಣ ಮಾಡುತ್ತಿರುವ ಜಾಗಕ್ಕೆ ಮಾಲೀಕತ್ವದ ಕುರಿತು ವಿವಾದವಿದೆ. ಅಲ್ಲದೆ, ಜಾಗದ ವಿವಾದ ಕುರಿತು ನ್ಯಾಯಾಲಯದಲ್ಲಿ ದಾವೆ ಇದ್ದರೂ ಸಹ ಗೋ ಶಾಲೆ ನಿರ್ಮಾಣಕ್ಕೆ ಮುಂದಾಗಿರುವುದು ಕಾನೂನು ವಿರೋಧಿಯಾಗಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಗೋ‌ ಶಾಲೆ ನಿರ್ಮಾಣಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರನು‌ ಗೂಂಡಾಗಳನ್ನು ಕರೆತಂದು ಕಾಮಗಾರಿ ನಡೆಸಲು ಬೆದರಿಕೆ ಹಾಕುತ್ತಿದ್ದರಂತೆ. ಕಾನೂನಿನ ಸಮಸ್ಯೆಯ ಬಗ್ಗೆ ಪಾಲಿಕೆಯ ಆಯುಕ್ತರಿಗೆ,‌ ಎಸ್​ಪಿ ಅವರಿಗೆ ತಿಳಿಸಿದ್ದರೂ ಸಹ ಕೆಲಸ ಮಾಡಲು ಮುಂದಾಗಿರುವುದು ಸರಿಯಲ್ಲ ಎಂಬುದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋ.ವ. ಮೋಹನಕೃಷ್ಣ, ಪವರ್ ಟಿವಿ, ಶಿವಮೊಗ್ಗ

RELATED ARTICLES

Related Articles

TRENDING ARTICLES