ಒಡಿಶಾ : ಬಾಲಸೋರ್‌ನ ಕರಾವಳಿಯಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಹೊಸ ಆವೃತ್ತಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ರಕ್ಷಣಾ ಮೂಲಗಳ ಪ್ರಕಾರ, ಕ್ಷಿಪಣಿಯು ಹೊಸ ತಾಂತ್ರಿಕ ಬೆಳವಣಿಗೆಗಳನ್ನು ಹೊಂದಿದ್ದು, ಇದು ಯಶಸ್ವಿಯಾಗಿದೆ. ಇದಕ್ಕೂ ಮುನ್ನ ಜನವರಿ 11 ರಂದು ಭಾರತವು ನೌಕಾಪಡೆಯ INS ವಿಶಾಖಪಟ್ಟಣಂ ಯುದ್ಧನೌಕೆಯಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ರಷ್ಯಾದ P-800 ಕ್ಷಿಪಣಿ ಮಾದರಿಯಲ್ಲಿಯೇ ಬ್ರಹ್ಮೋಸ್ ಅನ್ನು ತಯಾರಿಸಲಾಗಿದೆ. ಬ್ರಹ್ಮೋಸ್ ಭಾರತೀಯ ನೌಕಾಪಡೆಯ ಯುದ್ಧನೌಕೆಗಳ ಮುಖ್ಯ ಆಯುಧ ವ್ಯವಸ್ಥೆಯಾಗಿದೆ.