Thursday, January 23, 2025

ಕಿಟ್​ಕ್ಯಾಟ್​ ರ್ಯಾಪರ್ ಮೇಲೆ ಲಾರ್ಡ್​ ಪುರಿ ಜಗನ್ನಾಥ!

ನೆಸ್ಲೆ ಇಂಡಿಯಾದ ಉತ್ಪನ್ನವಾದ ಕಿಟ್‍ಕ್ಯಾಟ್‍ನ ರ‍್ಯಾಪರ್ ಅನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ಅದಕ್ಕೆ ಲಾರ್ಡ್ ಪುರಿ ಜನನ್ನಾಥ ಫೋಟೋವನ್ನು ಹಾಕಲಾಗಿದೆ. ಈ ಹಿನ್ನೆಲೆ ಗ್ರಾಹಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ನಂತರ ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ನೆಟ್ಟಿಗರು ಕಿಟ್‍ಕ್ಯಾಟ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಆ ಪ್ಯಾಕ್ ಅನ್ನು ನೆಸ್ಲೆ ಇಂಡಿಯಾ ಹಿಂತೆಗೆದುಕೊಂಡಿದೆ. ಜಾಹೀರಾತು ಪ್ರಚಾರದ ಭಾಗವಾಗಿ, ಕಿಟ್‍ಕ್ಯಾಟ್ ರ‍್ಯಾಪರ್ ಮೇಲೆ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಮಾತಾ ಸುಭದ್ರೆಯ ಚಿತ್ರವನ್ನು ಒಳಸಲಾಗಿದೆ. ಆದರೆ, ಈ ಫೋಟೋ ನೋಡಿದ ನೆಟ್ಟಿಗರು ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಟ್ವಿಟ್ಟರ್‌ನಲ್ಲಿ ಹರಿಹಾಯ್ದಿದ್ದರು.

RELATED ARTICLES

Related Articles

TRENDING ARTICLES