Sunday, December 22, 2024

ಆಫ್ರಿಕಾದಲ್ಲೂ ರಾಕಿ ಭಾಯ್​​ ಹವಾ..!

ಕನ್ನಡದ ನಟ ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ಹಾಡು ಆಫ್ರಿಕಾ ಖಂಡದಲ್ಲೂ ಸೌಂಡು ಮಾಡುತ್ತಿದೆ.ಅಲ್ಲಿನ ಜನಪ್ರಿಯ ಕಂಟೆಂಟ್​ ಕ್ರಿಯೇಟರ್​ ಕಿಲಿ ಪೌಲ್​ ಅವರು ‘ಕೆಜಿಎಫ್​’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್​ ಆಗುತ್ತಿದೆ. ಭಾರತದಲ್ಲಿರುವ ಅನೇಕರು ಕಿಲಿ ಪೌಲ್​ ವಿಡಿಯೋಗಳಿಗೆ ಫಿದಾ ಆಗಿದ್ದಾರೆ.

ಕೆಜಿಎಫ್​: ಚಾಪ್ಟರ್​ 1 ಸಿನಿಮಾದ ಹಿಂದಿ ಅವತರಣಿಕೆಯ ‘ಗಲಿ ಗಲಿ ಮೇ’ ಹಾಡಿನಲ್ಲಿ ‘ರಾಕಿಂಗ್​ ಸ್ಟಾರ್​’ ಯಶ್​ ಹಾಗೂ ಮೌನಿ ರಾಯ್​ ಅವರು ಜೊತೆಯಾಗಿ ಹೆಜ್ಜೆ ಹಾಕಿದ್ದರು. ಅದೇ ಹಾಡಿಗೆ ಈಗ ಕಿಲಿ ಪೌಲ್​ ಡ್ಯಾನ್ಸ್​ ಮಾಡಿದ್ದಾರೆ. ಆ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಯಶ್​ ಶ್ರೀನಿಧಿ ಶೆಟ್ಟಿ ನಟನೆಯ ‘ಕೆಜಿಎಫ್’​ ಒಂದು ಬ್ಲಾಕ್​ ಬಸ್ಟರ್​ ಸಿನಿಮಾ. ಈ ಮಾಸ್ಟರ್​ ಪೀಸ್​ ನನಗೆ ತುಂಬ ಇಷ್ಟ ಎಂದು ಕಿಲಿ ಪೌಲ್​ ಬರೆದುಕೊಂಡಿದ್ದಾರೆ. ಆ ಮೂಲಕ ಆಫ್ರಿಕಾದ ಮಂದಿಗೂ ‘ಕೆಜಿಎಫ್​’ ಚಿತ್ರದ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಒಂದೇ ದಿನದಲ್ಲಿ ಈ ವಿಡಿಯೋವನ್ನು 10 ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ.

 

View this post on Instagram

 

A post shared by Kili Paul (@kili_paul)

RELATED ARTICLES

Related Articles

TRENDING ARTICLES