ಬೆಂಗಳೂರು: ಮಾಧ್ಯಮಗಳಿಗೆ ನೀಡಲು ಆರೋಗ್ಯ ಇಲಾಖೆಯು 14 ಮಂದಿ ವೈದ್ಯರನ್ನು ವಕ್ತಾರರನ್ನಾಗಿ ನೇಮಿಸಿದೆ. ಈ ವಕ್ತಾರರ ಪಟ್ಟಿಯಲ್ಲಿ ಸರ್ಕಾರಿ ವೈದ್ಯಕೀಯ ಅಧಿಕಾರಿಗಳಿಗೆ ಪ್ರಾತಿನಿಧ್ಯವಿಲ್ಲದಿರುವುದಕ್ಕೆ ರಾಜ್ಯ ವೈದ್ಯಾಧಿಕಾರಿಗಳ ಸಂಘದಿಂದ ಅಸಮಾಧಾನ ವ್ಯಕ್ತವಾಗಿದೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್, ಕ್ಲಿನಿಕಲ್ ತಜ್ಞರ ಸಮಿತಿ ಅಧ್ಯಕ್ಷ ಡಾ.ಕೆ. ರವಿ, ಸದಸ್ಯರಾದ ಡಾ.ಸಿ.ಎನ್. ಮಂಜುನಾಥ್, ಡಾ.ಸಿ. ನಾಗರಾಜ್, ಡಾ. ಬಸವರಾಜ್, ಡಾ. ಪ್ರದೀಪ್ ರಂಗಪ್ಪ, ತಾಂತ್ರಿಕ ಸಲಹಾ ಸಮಿತಿ ಸದಸ್ಯರಾದ ಡಾ.ವಿ. ರವಿ, ಡಾ.ಬಿ.ಎಲ್. ಶಶಿಭೂಷಣ್, ಡಾ. ಗಿರಿಧರ್ ಬಾಬು, ಡಾ. ಶಿವಾನಂದ, ಡಾ. ಸವಿತಾ ಜಿ., ಶ್ವಾಸಕೋಶ ತಜ್ಞರಾದ ಡಾ. ಸತ್ಯನಾರಾಯಣ ಮೈಸೂರು, ಡಾ. ರವೀಂದ್ರ ಮೆಹ್ತಾ ಹಾಗೂ ಮಕ್ಕಳ ತಜ್ಞ ಡಾ. ವಿಶ್ವನಾಥ್ ಕಾಮೋಜಿ ಅವರು ವಕ್ತಾರರಾಗಿ ನೇಮಕಗೊಂಡಿದ್ದಾರೆ.