Monday, December 23, 2024

ಖ್ಯಾತ ಮಾಜಿ ಕ್ರಿಕೆಟಿಗ ಭಜ್ಜಿಗೆ ಕೊರೋನ ಪಾಸಿಟಿವ್

ಪಂಜಾಬ್: ಭಾರತದ ಮಾಜಿ ಖ್ಯಾತ ಕ್ರಿಕೆಟ್ ಆಟಗಾರ ಹರಭಜನ್ ಸಿಂಗ್​ಗೆ ಕೊರೋನ ಪಾಸಿಟಿವ್ ಆಗಿರುವ ಬಗ್ಗೆ ವರದಿಯಾಗಿದೆ. ಶುಕ್ರವಾರ ಈ ವಿಷಯವನ್ನು ಬಹಿರಂಗಪಡಿಸಿರುವ ಹರಭಜನ್​ಸಿಂಗ್ ಕೊರೋನ ಪಾಸಿಟಿವ್ ಕಾರಣದಿಂದಾಗಿ ತಾವು ಹೋಮ್ ಕ್ವಾರಂಟೀನ್ ಆಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ತಾವು ಕೊರೋನ ಸಂಕ್ರಮಿತರಾಗಿದ್ದರೂ ಅದರ ಗುಣಲಕ್ಷಣಗಳು ಪ್ರಖರವಾಗೇನೂ ಆಗಿಲ್ಲ. ನಾನು ಚೆನ್ನಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಟೆಸ್ಟ್ ಮಾಡಿಕೊಳ್ಳಿ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹರಭಜನ್ ಟ್ವಿಟ್ ಮಾಡಿದ್ದಾರೆ. ಹರಭಜನ್ ಈ ನಡುವೆ ತಮ್ಮ ಸಹ ಆಟಗಾರ ಹಾಗೂ ಪಂಜಾಬ್ ಕಾಂಗ್ರೆಸ್ ಮುಖಂಡರಾಗಿರುವ ನವಜೋತ್ ಸಿಂಗ್ ಸಿಧುಗೆ ಆತ್ಮೀಯರಾಗಿ, ಪಂಜಾಬ್ ರಾಜಕೀಯ ಅಖಾಡಾಕ್ಕಿಳಿಯುವ ಮುನ್ಸೂಚನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES