Thursday, December 19, 2024

ಮದುವೆಗೆ ಬರಲೇಬೇಡಿ,ಆರ್ಶೀವಾದ ಮರಿಲೇಬೇಡಿ

ಚಾಮರಾಜನಗರ: ಕೊರೋನಾ ಮೂರನೇ ಅಲೆ ರಾಜ್ಯದಲ್ಲಿ ಅಬ್ಬರ ಮಾಡುವುದಕ್ಕೆ ಮುಂಚೆಯೇ ಚಾಮರಾಜನಗರದ ಜೋಡಿಯೊಂದು ಅದ್ದೂರಿಯಾಗಿ ಮದುವೆ ಮಾಡಿಕೊಳ್ಳಲು ನಿಶ್ಚಯ ಮಾಡಿಕೊಂಡಿತ್ತು. ಸೋಂಕು ನಿಯಂತ್ರಣಕ್ಕೆ ಬಾರದೆ ನಾಗಲೋಟಕ್ಕೆ ಮುಂದುವರೆಸಿದೆ.

ಜ.22 ಹಾಗು 23 ನಿಗಧಿಯಾಗಿರುವ ಮದುವೆ. ಚಾಮರಾಜನಗರ ತಾಲ್ಲೂಕಿನ ಚನ್ನಪ್ಪನಪುರದ ಶ್ರೇಯಸ್, ವಿ.ಸಿ.ಹೊಸೂರಿನ ಸುಷ್ಮಾ ಅವರ ವಿವಾಹ. ಬಹಳ ಹಿಂದೆಯೇ ನಿಗಧಿಯಾಗಿರುವುದರಿಂದ ಈಗಾಗಲೇ ಮದುವೆಗೆ ಆಗಮಿಸುವಂತೆ ನೆಂಟರಿಷ್ಟರಿಗೆ, ಬಂಧು ಬಳಗ ಹಾಗೂ ಗ್ರಾಮಸ್ಥರಿಗೆ ಮದುವೆ ಆಮಂತ್ರಣ ಪತ್ರವನ್ನು ಎರಡು ಕುಟುಂಬಗಳು. ಹಂಚಿಕೆ ಮಾಡಿದ್ದಾರೆ.

ಪ್ರಸ್ತುತ ಹೆಚ್ಚುತ್ತಿರುವ ಕೊರೋನಾ ಹಿನ್ನಲೆ ಎರಡು ಕುಟುಂಬಗಳಿಂದ ನಿರ್ಧಾರ ಮಾಡಿದ್ದು.ಕೊರೋನಾ ನಿಯಮಗಳನ್ನು ಪಾಲಿಸಲು ಮುಂದಾದ ಕುಟುಂಬಗಳು. ತಮ್ಮಿಂದ ಕೊರೋನಾ ಹರಡಬಾರದು ಎಂಬ ಹಿನ್ನಲೆಯಲ್ಲಿ ಜನರನ್ನು ಸೇರಿಸದೆ ಸರಳವಾಗಿ ಮದುವೆ ಮಾಡಲು ನಿರ್ಧಾರಿಸಿದ್ದಾರೆ. ಎರಡೂ ಕುಟುಂಬಗಳು ಮಾತ್ರ ಭಾಗಿಯಾಗಿ ವಿವಾಹ ನೆರವೇರಿಸಲು ನಿರ್ಧಾರ ಮಾಡಿದ್ದಾರೆ.

RELATED ARTICLES

Related Articles

TRENDING ARTICLES